ಭಾಗಮಂಡಲ, ಮಾ. 22: ಭಾಗಮಂಡಲದಲ್ಲಿರುವ ನವೀಕೃತ ಕಾಶಿಮಠದ ಲೋಕಾರ್ಪಣೆ ಇಂದು ನೆರವೇರಿತು. ವಾರಣಾಸಿಯ ಶ್ರೀ ಕಾಶಿ ಮಠಾಧೀಶರಾದ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ವಿವಿಧ ಪೂಜಾದಿ ಕ್ರಿಯೆಗಳ ಬಳಿಕ ಲೋಕಾರ್ಪಣೆ ಮಾಡಿದರು. ನಂತರ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ದಾನಿಗಳು, ಭಕ್ತವೃಂದದವರು ಪಾಲ್ಗೊಂಡಿದ್ದರು.