ಕೂಡಿಗೆ, ಮಾ. 21: ಕೂಡುಮಂಗಳೂರು ಪೂರ್ಣಚಂದ್ರ ಬಡಾವಣೆಯಲ್ಲಿನ ಶ್ರೀಮಾತಾ ದಂಡಿನ ಚೌಡೇಶ್ವರಿ ದೇವಸ್ಥಾನ ಸಮಿತಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ತಾ. 22 ಮತ್ತು 23 ರಂದು ನಡೆಯಲಿದೆ.
ಬೆಳಿಗ್ಗೆಯಿಂದ ಗಣಪತಿ ಹೋಮ, ದುರ್ಗ ಹೋಮ, ನವಕಲಶ ಸ್ಥಾಪನೆ, ಪಂಚಾಮೃತ ಅಭಿಷೇಕ, ಮಹಾಪೂಜೆ, ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ. ಅನ್ನಸಂತರ್ಪಣೆ ಕಾರ್ಯಕ್ರಮ ತಾ. 23 ರಂದು ನಡೆಯಲಿದೆ ಎಂದು ದೇವಾಲಯ ಸಮಿತಿಯ ಹೆಚ್.ಕೆ. ರಾಮಚಂದ್ರ, ಕೆ.ಎಸ್. ಸತೀಶ್ ತಿಳಿಸಿದ್ದಾರೆ.