ಮಡಿಕೇರಿ, ಮಾ. 21: ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳ ಸಮಾಗಮ, ಹಿರಿಯ ಶಿಕ್ಷಕರಿಗೆ ಸನ್ಮಾನ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವ ಅರ್ಥಪೂರ್ಣವಾಗಿ ಮೂಡಿಬಂದಿತು. ನೂರಾರು ವರ್ಷಗಳ ಇತಿಹಾಸ ಇರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮಡಿಕೇರಿಯ ಹಳೆಯ ವಿದ್ಯಾರ್ಥಿ ಗಳ ಸಂಘ ಆಯೋಜಿಸಿದ್ದ ‘ನಮ್ಮ ಶಾಲೆ ನಮ್ಮ ಹೆಮ್ಮೆ’ ಎಂಬ ಕಾರ್ಯಕ್ರಮ ಶಾಲಾ ಅವರಣದಲ್ಲಿ ವಿಶಿಷ್ಟವಾಗಿ ನಡೆಯಿತು. ಶತಮಾನ ಗಳನ್ನು ಕಂಡಿರುವ ಮಂಜಿನನಗರಿ ಮಡಿಕೇರಿ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾದಾನ ಮಾಡಿ ನಿವೃತ್ತರಾದ 14 ಶಿಕ್ಷಕರನ್ನು ಗೌರವಿಸಲಾಯಿತು. ಶಾಲೆಯ ಹಿರಿಯ ಶಿಕ್ಷಕ ದೇವಯ್ಯ, ನಾಣಯ್ಯ, ಪಾರ್ವತಿ, ಬೇಗಂ, ನೀಲಮ್ಮ, ಸರಸ್ವತಿ, ಗಂಗಮ್ಮ, ಶಿವರಾಂ, ಕಲಾವತಿ, ಮಾಯಮ್ಮ, ಶಾರದ, ಸುಂದರಮ್ಮ, ವಿಮಲ, ಶಾಲೆಯ ಸಹಾಯಕರೂ ಆದ ರುಕ್ಮಿಣಿ ಹಾಗೂ ಮತ್ತಿತರ ಸಾಧಕ ರನ್ನು ಸನ್ಮಾನ ಮಾಡಲಾಯಿತು.
ಹಿರಿಯ ಶಿಕ್ಷಕ ದೇವಯ್ಯ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಸಾಕಷ್ಟು ಸಾಧಕರು ದೇಶದಲ್ಲಿದ್ದಾರೆ. ಇದೇ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿ ಗಳು ಅನೇಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪೋಷಕರು ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಶಿಕ್ಷಣ ಪಡೆಯಲು ಮುಂದಾಗಬೇಕಿದೆ ಎಂದರು. ಇನ್ನೂ ವೇದಿಕೆಯಲ್ಲಿ ಕುಳಿತಿದ್ದ ಹಿರಿಯ ಶಿಕ್ಷಕರು ತಮ್ಮ ನೆಚ್ಚಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಮಾಡಿದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಗಳು ಕಾಲೇಜಿನಲ್ಲಿ ಪಾಠ ಕಲಿಸಿದ ಗುರುಗಳನ್ನು ನೆನೆಯುವದು ನಾವು ನೋಡಿದ್ದೇವೆ. ಆದರೆ ಈ ಹಳೆಯ ವಿದ್ಯಾರ್ಥಿಗಳು ಅಕ್ಷರ ಕಲಿಸಿದ ಗುರುಗಳ ನೆನೆಪು ಮಾಡಿಕೊಂಡು ಈ ಕಾರ್ಯಕ್ರಮ ಮಾಡುತ್ತಿರುವದು ನಮ್ಮ ಸೌಭಾಗ್ಯ ಎಂದು ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆ ಗಳಿಂದ ಸಾಕಷ್ಟು ಅನುಕೂಲವಿದೆ ಇದನ್ನು ಅರಿತು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವಂತಾಗ ಬೇಕು. ಹಿಂದೆ ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿ ಸಾಧಿಸಲು ಶಿಕ್ಷಕರು ಗುರುವಿನಂತೆ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಇಂದು ವ್ಯವಸ್ಥೆ ಬದಲಾಗಿದೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಆಕರ್ಷಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹಳೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪಾಠವಲ್ಲದೇ ಜೀವನ ಪಾಠ ಕಲಿಸಿದ ಗುರುಗಳ ಮುಂದೆ ಅನುಭವ ಹಂಚಿಕೊಂಡರು. ನಂತರ ಶಾಲೆಯ ವಿದ್ಯಾರ್ಥಿ ಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧÀ್ಯಕ್ಷೆ ಕುಶಾಲಿನಿ, ಸದಸ್ಯರುಗಳಾದ ಲೋಹಿತ್, ಪೀಟರ್, ಶರತ್, ಗಜೇಂದ್ರ, ರಾಜರಾಮ್, ಮಲ್ಲಿಕಾರ್ಜುನ್, ದಯಾನಂದ, ಹೇಮಂತ್, ರಾಜೇಶ್, ಪವಿತ್ರ, ಸೌಮ್ಯ, ಜೀವಿತ, ನೇತ್ರ, ಅನುಪಮ, ಭಾಗಿರಥಿ ಮತ್ತಿತರು ಹಾಜರಿದ್ದರು.