ಗುಡ್ಡೆಹೊಸೂರು, ಮಾ. 21: ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಶ್ರೀ ಕುಡೆಕಲ್ಲು ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮೂರು ದಿನಗಳ ಕಾಲ ಕೋಲಕಾರ್ಯಕ್ರಮ ನಡೆಯಲಿದೆ.

ತಾ. 24 ರಂದು ರಾತ್ರಿ 8 ಗಂಟೆಗೆ ಕಳಿಯಾಟಕ್ಕೆ ಕೂಡುವದು, ರಾತ್ರಿ 9.30 ಗಂಟೆಗೆ ಶ್ರೀವಯನಾಟ್ ಕುಲವನ್ ದೈವಸ್ಥಾನದಿಂದ ಕಲಶ ತರುವದು. 10ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ್ ಮತ್ತು ಗುರುಕಾರ್ಣೋರು ದೈವದ ಕೋಲ ನಡೆಯಲಿದೆ. ತಾ. 25 ರಂದು ಪೂರ್ವಾಹ್ನ 8ಕ್ಕೆ ಶ್ರೀಪೋಟ್ಟ ದೈವ 8.30ರಿಂದ ಶ್ರೀವಿಷ್ಣುಮೂರ್ತಿ, ಶ್ರೀರುದ್ರಚಾಮುಂಡಿ, ಶ್ರೀಪಾಷಣಮೂರ್ತಿ ದೈವಗಳ ಕೋಲ ನಡೆಯಲಿದೆ. 11ಕ್ಕೆ ಶ್ರೀದೈವಗಳ ಕಲಶ ಹೊರುವದು. ನಂತರ ಹರಕೆ ಪ್ರಸಾದ ಮತ್ತು ತುಲಾಭಾರ ಸೇವೆಗಳು ನಡೆಯಲಿವೆ. ಅದೇ ತಾ. 26 ರಾತ್ರಿ 9 ಗಂಟೆಯಿಂದ ಶ್ರೀವಿಷ್ಣುಮೂರ್ತಿ, ಪಾಷಣಮೂರ್ತಿ, ಶ್ರೀರುದ್ರಚಾಮುಂಡಿ ಮತ್ತು ಉಪದೈವಗಳಕೋಲ ನಡೆಯಲಿದೆ. ಪ್ರತಿ ದಿನ ಅನ್ನದಾನ ನಡೆಯಲಿದೆ ಎಂದು ಆಡಳ್ತೆದಾರ ವಿಶ್ವನಾಥ್‍ಗೌಡ ತಿಳಿಸಿದ್ದಾರೆ.