ಗೋಣಿಕೊಪ್ಪಲು, ಮಾ. 21: ಇತ್ತೀಚೆಗೆ ಸೇನೆಯಿಂದ ನೀಡುವ ಪ್ರತಿಷ್ಠಿತ ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನರಾದ ಪೊನ್ನಂಪೇಟೆಯ ಮಹಾತ್ಮಗಾಂಧಿ ನಗರದ ನಿವಾಸಿಗಳಾದ ನಾಗರಾಜ್ ಮತ್ತು ಲಕ್ಷ್ಮಿ ದಂಪತಿ ಪುತ್ರನಾಗಿರುವ ಎಚ್.ಎನ್.ಮಹೇಶ್ ಅವರನ್ನು ಅವರು ಓದಿದÀ ಪೊನ್ನಂಪೇಟೆಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಶಾಲೆಯ ಆಡಳಿತ ಮಂಡಳಿಯು ಸನ್ಮಾನಿಸಿ ಗೌರವಿಸಿತು.

ಈ ಸಂದರ್ಭ ಇದೇ ಶಾಲೆಯಲ್ಲಿ ಶಿಕ್ಷಣ ಪಡೆದು ಎಂ.ಎ.ಕನ್ನಡ ವಿಭಾಗದಲ್ಲಿ ಸಾಧನೆ ಮಾಡಿ 9 ಚಿನ್ನದ ಪದಕ ಪಡೆದ ಪೂಜಿತ ಪಿ.ಎಲ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮುಖ್ಯ ಶಿಕ್ಷಕರಾದ ಬಿ.ಎಂ. ವಿಜಯ್, ಸಿಆರ್‍ಪಿ, ಟಿ.ಬಿ.ಜೀವನ್, ಶಿಕ್ಷಕರಾದ, ಫಿಲೋಮಿನಾ, ಗಂಗಮ್ಮ, ಜಾನ್ಸಿ, ಶಕೀಲಭಾನು, ಮಂಗಳಾಂಗಿ, ಸಾವಿತ್ರಿ, ಗಂಗಾಮಣಿ, ನಿಂಗರಾಜು, ಮಹೇಶ್, ವನಿತ, ರೋಜಿ, ಶಿಕ್ಷಕರಾದ ಎ.ಎಸ್.ವಾಸು ವರ್ಮ, ವಿದ್ಯಾರ್ಥಿ ಸಂಘದ ಚಂಗಪ್ಪ, ರಾಮಕೃಷ್ಣ, ಪ್ರೇಮ್, ಮುಂತಾದವರು ಇದ್ದರು.

-ಹೆಚ್.ಕೆ.ಜಗದೀಶ್