ಮಡಿಕೇರಿ, ಮಾ. 22: ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಮತ್ತು ಉದ್ಯಮಗಳ ಒಕ್ಕೂಟ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮಹಿಳಾ ಉದ್ಯಮಿ ಪವಿತ್ರ ಗಣಪತಿ ಅವರಿಗೆ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಸಂದರ್ಭ ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಸುಧಾಕರ್ ಶೆಟ್ಟಿ, ಹಿರಿಯ ಉಪಾಧ್ಯಕ್ಷ ಸಿ.ಆರ್, ಜನಾರ್ದನ್, ಉಪಾಧ್ಯಕ್ಷ ಪೆರಿಕ್ಕಲ್ ಎಂ. ಸುಂದರ್, ನಿರ್ಗಮಿತ ಅಧ್ಯಕ್ಷ ಕೆ. ರವಿ, ಮಹಿಳಾ ಉದ್ಯಮಿ ಲಕ್ಷ್ಮಿ ಕಾಮತ್ ಇದ್ದರು.