ವೀರಾಜಪೇಟೆ, ಮಾ. 22: ಫೀಲ್ಡ್‍ಮಾರ್ಷಲ್ ಕಾರ್ಯಪ್ಪ ಹಾಕಿ ಟ್ರಸ್ಟ್ ವೀರಾಜಪೇಟೆ ಇವರ ವತಿಯಿಂದ ಹಾಕಿ ತರಬೇತಿ ಶಿಬಿರವು ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ತಾ. 31ರಿಂದ ಏಪ್ರಿಲ್ 21 ರವರೆಗೆ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ನಡೆಯಲಿದೆ. ಶಾಲಾ ಬಾಲಕ - ಬಾಲಕಿಯರಿಗೆ ಹಾಕಿ ತರಬೇತು ಶಿಬಿರವನ್ನು ಹಮ್ಮಿಕೊಳ್ಳಲಾಗಿದೆಯೆಂದು ಟ್ರಸ್ಟ್‍ನ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಅವರು ತಿಳಿಸಿದ್ದಾರೆ.

ಕಾರ್ಯಪ್ಪ ಹಾಕಿ ಟ್ರಸ್ಟ್ ವತಿಯಿಂದ ಇದು 25ನೇ ವರ್ಷದ ಹಾಕಿ ಶಿಬಿರವಾಗಿದ್ದು, ರಾಜ್ಯಮಟ್ಟದ ನುರಿತ ತರಬೇತುದಾರರಿಂದ ತರಬೇತಿಯನ್ನು ಕೊಡಿಸಲಾಗುವದೆಂದು ಟ್ರಸ್ಟ್‍ನ ಕಾರ್ಯದರ್ಶಿ ಸಂಪಿ ಪೂಣಚ್ಚ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 8317397184, 9482246390ಯನ್ನು ಸಂಪರ್ಕಿಸಬಹುದು.