ಮಡಿಕೇರಿ, ಮಾ. 21: ಮನೆ ಮನೆ ಕವಿಗೋಷ್ಠಿ ಕುಟುಂಬ ಜಿಲ್ಲಾ ಸಾಹಿತ್ಯ ಸಂಘಟನೆ ಕೊಡಗು ವತಿಯಿಂದ ಕೊಡಗಿನ ಹಿರಿಯ ಕವಿಗಳಾದ ಗಿರೀಶ್ ಕಿಗ್ಗಾಲು ಅವರ ಪತ್ನಿ ಶಶಿಕಲಾ ಗಿರೀಶ್ ಅವರ ಪ್ರಾಯೋಜಕತ್ವದಲ್ಲಿ ತಾ. 24 ರಂದು ಮೂರ್ನಾಡು ಬೇತ್ರಿ ಬಳಿಯ ಕಿಗ್ಗಾಲು ಗ್ರಾಮದ ಗಿರೀಶ್ ಅವರ ಮನೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಐದನೆಯ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಹಾಗೂ ಗೀತ ಗಾಯನ ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ ಎಂದು ಮನೆ ಮನೆ ಕವಿಗೋಷ್ಠಿ ಸಂಚಾಲಕ ಪಿ.ಎಸ್. ವೈಲೇಶ್ ತಿಳಿಸಿದ್ದಾರೆ.