ಮಡಿಕೇರಿ, ಮಾ. 22: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಈ ಸಾಲಿನಿಂದ ಪ್ರಥಮ ಭಾರಿಗೆ ಆಯೋಜಿಸಿರುವ ಸ್ವಾತಂತ್ರ್ಯ ಹೋರಾಟಗಾರರ ಒಂದು ನೆನಪು ಎಂಬ ದತ್ತಿ ಕಾರ್ಯಕ್ರಮವು ತಾ. 23ರಂದು (ಇಂದು) ಕುಶಾಲನಗರದ ಅನುಗ್ರಹ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಾಗಿತ್ತು. ಆದರೆ ರಾಜ್ಯ ಪೌರಾಡಳಿತ ಸಚಿವರ ನಿಧನ ಹಿನ್ನೆಲೆ ಶೋಕಚರಣೆ ಇರುವ ಕಾರಣದಿಂದ ಕಾರ್ಯಕ್ರಮವನ್ನು ತಾ. 25ಕ್ಕೆ ಮುಂಡೂಡಲಾಗಿದೆ ಎಂದು ಕ.ಸಾ.ಪ. ಅಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದ್ದಾರೆ.
ಉದ್ಯಮಿಗಳಾದ ಗೋಣಿಕೊಪ್ಪದ ದಿವಂಗತ ಎಲ್.ಎಂ.ಗಂಗಾಧರ್ ಮತ್ತು ಸುಲೋಚನಾ ಗಂಗಾಧರ್ ಅವರ ನೆನಪಿಗಾಗಿ ಅವರ ಮಕ್ಕಳಾದ ಮೋಹನ್ ಮತ್ತು ಸಹೋದರರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಈ ದತ್ತಿ ಕಾರ್ಯಕ್ರಮ ವನ್ನು ಪ್ರಥಮವಾಗಿ ಆಚರಿಸಲಾಗು ತ್ತಿದೆ. ಇದರೊಂದಿಗೆ 2018-19ನೇ ಸಾಲಿನಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕøತರಾದ ವೀರ ಯೋಧ ಹೆಚ್.ಎನ್. ಮಹೇಶ್ ರವರಿಗೆ ಸನ್ಮಾನಿಸಿ, ಗೌರವಿಸಲಾಗುತ್ತಿದೆ.
ಕಾರ್ಯಕ್ರಮವನ್ನು ಕುಶಾಲನಗರ ಅನುಗ್ರಹ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಎಸ್.ಕೆ.ಸತೀಶ್ ಅವರು ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್‍ಸಾಗರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕುಶಾಲನಗರ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಂಡರಿನಾಥ್ ನಾಯ್ಡು, ಕುಶಾಲನಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ದತ್ತಿ ಸಂಸ್ಥಾಪಕರಾದ ಗೋಣಿಕೊಪ್ಪದ ಜಿ.ಎಂ.ಜಿ ಮೋಹನ್ ಅವರು ಮುಖ್ಯ ಅಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.