ಶನಿವಾರಸಂತೆ, ಮಾ. 22: ಸೋಮವಾರಪೇಟೆ ಸಮೀಪದ ಭುವಂಗಾಲ ಗ್ರಾಮದ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿದ್ದು, ಕಾಫಿ ತೋಟ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಭುವಂಗಾಲ ಗ್ರಾಮದ ಬೆಳೆಗಾರ ಕೆ.ಎಸ್. ವಿವೇಕ್ ಅವರ ಕಾಫಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿ ಸುಮಾರು 3 ಎಕರೆ ಜಾಗದಲ್ಲಿದ್ದ ಕಾಫಿ, ಸಿಲ್ವರ್, ಮೆಣಸು ಸಂಪೂರ್ಣವಾಗಿ ಸುಟ್ಟುಹೋಗಿದೆ. ಈ ಬಗ್ಗೆ ಪರಿಹಾರ ಕೋರಿ ಕೃಷಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.