ಮಡಿಕೇರಿ, ಮಾ. 22: ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ಕೊಡಗಿನ ಕೆ.ಆರ್. ಮೋನಿಕಾ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆಯುವದರೊಂದಿಗೆ ವೈದ್ಯಕೀಯ ಕಾಲೇಜಿನಲ್ಲೇ ಎರಡನೇ ಸ್ಥಾನ ಗಳಿಸಿದ್ದಾರೆ.
ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದಲ್ಲಿ ಅನಾಚಮಿ, ಬಯೋಕೆಮಿಸ್ಟ್ರಿ, ಫೊರೆನ್ಸಿಕ್ ಮೆಡಿಸಿನ್ನಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ವೈದ್ಯಕೀಯ ಶಿಕ್ಷಣದ ಪ್ರಥಮ ವರ್ಷದಲ್ಲಿ ಚಿನ್ನದ ಪದಕದೊಂದಿಗೆ 10ನೇ ರ್ಯಾಂಕ್ ಗಳಿಸಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಡಾ. ಮೋನಿಕಾ ಮಡಿಕೇರಿ ಭಗವತಿ ನಗರದ ಕೆ.ಎನ್. ರಾಮಚಂದ್ರಾಚಾರ್-ದಮಯಂತಿ ದಂಪತಿಗಳ ಪುತ್ರಿ.