ಮಡಿಕೇರಿ, ಮಾ. 20: ನಗರದ ಸ್ಟೋನ್‍ಹಿಲ್ ಬಳಿ ವ್ಯೂಪಾಯಿಂಟ್‍ನಲ್ಲಿಂದು ಬೆಂಕಿ ಕಾಣಿಸಿಕೊಂಡಿತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿಯನ್ನು ಹತೋಟಿಗೆ ತಂದಿತು. ಯಾರೋ ಕಿಡಿಗೇಡಿಗಳು ಸ್ಟೋನ್‍ಹಿಲ್ ಕೆಳಭಗದ ಹುಲ್ಲುಗಾವಲಿಗೆ ಬೆಂಕಿ ಹಚ್ಚಿದ್ದರಿಂದ ಈ ಅವಘಡ ಸಂಭವಿಸಿದೆ.