ಮಡಿಕೇರಿ, ಮಾ.20: ನಗರದ ವಿದ್ಯುತ್ ಉಪ- ಕೇಂದ್ರದಿಂದ ಹೊರಹೋಗುವ ಗದ್ದಿಗೆ ಫೀಡರ್, ಬೋಯಿಕೇರಿ ಫೀಡರ್ನಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಿರ್ವಹಿಸಬೇಕಿರುವದರಿಂದ ತಾ. 21 ರಂದು (ಇಂದು) ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಆದ್ದರಿಂದ ಗೌಡ ಸಮಾಜ, ಜೂನಿಯರ್ ಕಾಲೇಜು, ಗಣಪತಿ ಬೀದಿ, ಮಹದೇವಪೇಟೆ, ರಾಣಿಪೇಟೆ, ಕಾನ್ವೆಂಟ್ ಜಂಕ್ಷನ್, ಸಂತ ಜೋಸೇಫ್ ಶಾಲೆ, ಭಗವತಿ ನಗರ ಹಾಗೂ ಬೋಯಿಕೇರಿ, ಮಕ್ಕಂದೂರು, ಮುಕ್ಕೋಡ್ಲು, ಹಮ್ಮಿಯಾಲ, ಸುತ್ತಮುತ್ತ, ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಲಿದೆ. ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ ಕೋರಿದ್ದಾರೆ.