ಮಡಿಕೇರಿ, ಮಾ.20: ಮೈಸೂರು-ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣಾ 2019ರ ಸಂಬಂಧ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ 24*7 ಕಂಟ್ರೋಲ್ ರೂಮ್ (ಸಹಾಯವಾಣಿ)ನ್ನು ತೆರೆದಿದ್ದು, ಲೋಕಸಭಾ ಚುನಾವಣೆ 2019ರ ಸಂಬಂಧ ದೂರು ನೀಡಲು ಅಥವಾ ಇನ್ನಿತರೆ ಯಾವದೇ ಚುನಾವಣಾ ಸಂಬಂಧ ಮಾಹಿತಿಗಳನ್ನು ಪಡೆಯಲು ಸಹಾಯಕ ಚುನಾವಣಾಧಿಕಾರಿಯವರ ಕಚೇರಿ, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08272-222700ಗೆ ಕರೆ ಮಾಡುವಂತೆ ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನ ಸಭಾಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಟಿ.ಜವರೇಗೌಡ ತಿಳಿಸಿದ್ದಾರೆ.