ಮಡಿಕೇರಿ, ಮಾ. 20: ಕೊಡಗು ಜಿಲ್ಲಾ ಗುತ್ತಿಗೆದಾರರ ಕ್ರೆಡಿಟ್ ಸಹಕಾರ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಕಿಮ್ಮುಡಿರ ಎ. ರವಿಚಂಗಪ್ಪ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಬಿ.ಕೆ. ರವೀಂದ್ರ ರೈ ಮತ್ತು ನಿರ್ದೇಶಕರುಗಳಾಗಿ ಮಂಡುವಂಡ ಬಿ. ಜೋಯಪ್ಪ, ಕೆ.ಬಿ.ಪೂಣಚ್ಚ, ಬಿ.ಬಿ. ಐತಪ್ಪ ರೈ, ಎಂ.ಎಸ್.ಗೋಪಾಲಕೃಷ್ಣ ನಾಯರ್, ಸಿ.ಪಿ. ಉತ್ತಪ್ಪ, ಎಂ. ಅರುಣಕುಮಾರ್, ಸಣ್ಣೇಗೌಡ, ಎಂ.ಕೆ. ಚಂಗಪ್ಪ, ರಾಜೀವ್ ಲೋಚನ ಬಿ.ಪಿ., ಸಿ.ಯು. ತಿಮ್ಮಯ್ಯ ಮತ್ತು ಹೆಚ್.ಆರ್. ಧರ್ಮರಾಜ್ ಇವರುಗಳು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಬ್ಯಾಂಕಿನಲ್ಲಿ ಸುಮಾರು 530 ಸದಸ್ಯರುಗಳು ಇದ್ದು, ಇತ್ತೀಚೆಗೆ ಬ್ಯಾಂಕ್ನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆದಿತ್ತು.