ವೀರಾಜಪೇಟೆ, ಮಾ. 20: ಭಾರತ ದೇಶ ಹಲವು ಸಂಸ್ಕøತಿಗಳ ನೆಲೆವೀಡು. ಇಲ್ಲಿನ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಸಮಾಜವು ಮುಂದಾಗಬೇಕು ಎಂದು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜ ಅಧ್ಯಕ್ಷ, ಮಾಜಿ ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಲಬಾರ್ ರಸ್ತೆ ಮೀನುಪೇಟೆ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ವಾರ್ಷಿಕ ಮಹೋತ್ಸವ ಮತ್ತು ವಜ್ರ ಮಹೋತ್ಸವದ ತೆರೆ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಧರ್ಮ ಮತ್ತು ಸಂಸ್ಕøತಿಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಪ್ರಯತ್ನ ನಮ್ಮದಾಗಬೇಕು ಎಂದು ಹೇಳಿದರು.
ಸಮಾರಂಭವನ್ನು ಉದ್ದೇಶಿಸಿ ಪಟ್ಟಣ ಸಹಕಾರ ಬ್ಯಾಂಕ್ ನಿರ್ದೇಶಕ ಕರ್ನಂಡ ಸೋಮಯ್ಯ ಮತ್ತು ಉದ್ಯಮಿ ವಿನೋದ್ ಥರ್ಮಲ್ ಮಾತನಾಡಿದರು.
ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ಅಧ್ಯಕ್ಷ ಇ.ಸಿ ಜೀವನ್ ಸಮಾರಂಭದ ಅಧÀ್ಯಕ್ಷತೆ ವಹಿಸಿದ್ದರು.
ಕುಮಾರಿ ಸಮಿಕ್ಷಾ ರಾಜನ್ ಅವರ ನೃತ್ಯ ಪ್ರದರ್ಶನ ನಡೆಯಿತು. ನಂತರದಲ್ಲಿ ಓಣಂ ಅಚರಣಾ ಸಮಿತಿಯ ಪ್ರಯೋಜಕತ್ವದಲ್ಲಿ ಕಣ್ಣೂರು ಮೆಲೋಡಿಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.