ಶ್ರೀಮಂಗಲ, ಮಾ. 20: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಮಾಹಿತಿಯ ಹಿನ್ನೆಲೆ ಹರಿಹರದಲ್ಲಿ ಮರಳು ಸಹಿತ ಟಿಪ್ಪರ್ ಅನ್ನು ಪೊಲೀಸರು ವಶಪಡಿಸಿಕೊಂಡು ಚಾಲಕ ರಜನಿ ಎಂಬಾತನನ್ನು ಬಂಧಿಸಿದ್ದಾರೆ.

ಹರಿಹರದ ಲಕ್ಷಣತೀರ್ಥ ನದಿಯಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿತ್ತು. ಟಿಪ್ಪರ್ ಕೋತೂರು ಗ್ರಾಮದ ಸಂಪತ್ ಎಂಬವರಿಗೆ ಸೇರಿದಾಗಿದೆ. ಚಾಲಕ ರಜನಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಕಾರ್ಯಚರಣೆಯಲ್ಲಿ ಶ್ರೀಮಂಗಲ ಪಿ.ಎಸ್.ಐ ಮರಿಸ್ವಾಮಿ, ಸಿಬ್ಬಂದಿಗಳಾದ ಸುಕುಮಾರ್, ಮಂಜುನಾಥ್ ಪಾಲ್ಗೊಂಡಿದ್ದರು.