ಮಡಿಕೇರಿ, ಮಾ. 20: ಕೇಂದ್ರ ಸರ್ಕಾರದ ವತಿಯಿಂದ ಗಿರಿಜನರಿಗೆ ಉಚಿತವಾಗಿ ನೀಡುತ್ತಿರುವ ಪೌಷ್ಟಿಕ ಆಹಾರ ಧಾನ್ಯಗಳ ವಿತರಣೆಯಲ್ಲಿ ಲೋಪ ಹಾಗೂ ತಾರತಮ್ಯ ಆಗುತ್ತಿದೆ ಎಂದು ಮಾಲ್ದಾರೆ ಬಳಿಯ ದಿಡ್ಡಳ್ಳಿ ಗಿರಿಜನ ನಿವಾಸಿಗಳು ದೂರಿದ್ದಾರೆ.

ಕೂಡಲೇ ಜಿಲ್ಲಾಧಿಕಾರಿಗಳು ನಮ್ಮ ಗಿರಿಜನ ಹಾಡಿಗೆ ಆಗಮಿಸಿ ನಮಗೆ ಜಿಲ್ಲಾಡಳಿತದಿಂದ ವಿತರಿಸಿರುವ ಆಹಾರ ಸಾಮಗ್ರಿಗಳನ್ನು ಪರಿಶೀಲಿಸಬೇಕೆಂದು ಅಲ್ಲಿನ ಗಿರಿಜನ ಮುಖಂಡರೂ ಆದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಜೆ.ಕೆ. ಅಪ್ಪಾಜಿ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಗಿರಿಜನರಿಗೆ ಉಚಿತವಾಗಿ ನೀಡುತ್ತಿರುವ ಆಹಾರ ಧಾನ್ಯಗಳ ವಿತರಣೆಯ ಟೆಂಡರನ್ನು ಪಡೆದು ಕೊಂಡಿರುವ ವ್ಯಕ್ತಿ ಜಿಲ್ಲಾಡ ಳಿತದ ಕೆಲವು ಅಧಿಕಾರಿಗಳೊಂದಿಗೆ ಶಾಮೀಲಾಗುವ ಮೂಲಕ ಗಿರಿಜನ ನಿವಾಸಿಗಳಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಅಪ್ಪಾಜಿ ಗಂಭೀರ ಆರೋಪ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಚಿಂತನೆಗೆ ವ್ಯತಿರಿಕ್ತವಾಗಿ ಜಿಲ್ಲಾಡಳಿತದ ಕೆಲವರು ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ. 15 ಕೆಜಿ ಅಕ್ಕಿಯನ್ನು ನೀಡಬೇಕಾದರೂ ಕೇವಲ 10 ರಿಂದ 12 ಕೆಜಿ ನೀಡುತ್ತಿದ್ದಾರೆ. ಪೌಷ್ಟಿಕಾಂಶ ಗಳನ್ನು ಪೂರೈಸುವ ಕೋಳಿ ಮೊಟ್ಟೆಗಳನ್ನು ವಿತರಿಸಬೇಕೆಂಬ ಸ್ಪಷ್ಟ ಆದೇಶ ಇದೆ.

1 ಕೆಜಿ ಪ್ರಮಾಣದಷ್ಟು ಶುದ್ಧ ನಂದಿನಿ ತುಪ್ಪವನ್ನು ವಿತರಿಸಬೇಕಿತ್ತು. ಆದರೆ ಟೆಂಡರುದಾರ ಕೇವಲ 800 ಗ್ರಾಂ ತುಪ್ಪವನ್ನು 200 ಗ್ರಾಂ ತೂಕವುಳ್ಳ ನಾಲ್ಕು ಬಾಟಲಿಗಳಲ್ಲಿ ನೀಡುತ್ತಿದ್ದಾರೆ. ಇನ್ನು ಹುಳು ಬಾದಿಸಿರುವ ಹೆಸರು ಕಾಳು, ಗುಣಮಟ್ಟವಿಲ್ಲದ ತೊಗರಿಬೇಳೆ, ಹುರುಳಿ ಕಾಳುಗಳನ್ನು ನೀಡಲಾಗುತ್ತಿದೆ.

ಹಾಡಿಯಲ್ಲಿ ಸರ್ಕಾರ ಪೂರೈಸುತ್ತಿ ರುವ ಉಚಿತ ಆಹಾರ ಧಾನ್ಯಗಳನ್ನು ಕೆಲವು ಕಟುಂಬಗಳಿಗೆ ನೀಡದೆ ತಾರತಮ್ಯ ಮಾಡಲಾಗುತ್ತಿದೆ. ಅಂತಹವರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು.

ಒಂದು ತಿಂಗಳು ಆಹಾರ ಧಾನ್ಯಗಳನ್ನು ನೀಡಿದರೆ ಮತ್ತೆ ಮೂರು ತಿಂಗಳು ನೀಡುತ್ತಿಲ್ಲ. ಉಚಿತ ಧವಸ ಧಾನ್ಯ ಬರಲಿದೆ ಎಂದು ಕಾದು ಸಾಕಾಗುತ್ತಿದೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ನಮಗೆ ಪ್ರತೀ ತಿಂಗಳು ಆಹಾರ ಧಾನ್ಯಗಳನ್ನು ಪೂರೈಸ ಬೇಕೆಂದು ಮಹಿಳೆಯರು ಒತ್ತಾಯಿಸಿದ್ದಾರೆ.

ವೀರಾಜಪೇಟೆ ತಾಲೂಕಿನಲ್ಲಿ 7000 ಜೇನುಕುರುಬ ಕುಟುಂಬ ಗಳಿದ್ದು ಅವರಿಗೆ ಸರ್ಕಾರದ ಸವಲತ್ತುಗಳು ಸರಿಯಾಗಿ ತಲಪುತ್ತಿಲ್ಲ. ಆಯ್ದ ಕೆಲವು ನಿವಾಸಿಗಳಿಗೆ ಉಚಿತ ಪಡಿತರ ವಿತರಿಸುವಲ್ಲಿಯೂ ಭಾರಿ ಪ್ರಮಾಣದ ಅನ್ಯಾಯ ಕಂಡು ಬರುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿ ಗಳು ಇತ್ತ ಗಮನಹರಿಸಬೇಕು.

ಟೆಂಡರುದಾರರೊಂದಿಗೆ ಶಾಮೀಲಾಗಿರುವ ಗಿರಿಜನ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ದಿಡ್ಡಳ್ಳಿ ಹಾಡಿಯ ನಿವಾಸಿ ಗಳೊಂದಿಗೆ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.