ಶ್ರೀಮಂಗಲ, ಮಾ. 20: ಹುದಿಕೇರಿ ಪಟ್ಟಣದಲ್ಲಿ ಗ್ರಾ.ಪಂ.ಯ ಹಳೆಯ ಬಸ್ ತಂಗುದಾಣ ಎದುರಿನಲ್ಲಿ ಈಗ ಹೊಸ ಬಸ್ ತಂಗುದಾಣ ನಿರ್ಮಿಸುತಿರುವದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಳೆಯ ತಂಗುದಾಣವನ್ನು ಸುಣ್ಣ ಬಣ್ಣ ಹೊಡೆದು ದುರಸ್ತಿ ಪಡಿಸಿದರೆ ಸಾಕಾಗಿದ್ದು, ಅದರ 20 ಅಡಿ ದೂರದಲ್ಲಿ ಮತ್ತೊಂದು ತಂಗುದಾಣವನ್ನು ನಿರ್ಮಿಸುವದು ಸಾರ್ವಜನಿಕ ಹಣ ಪೋಲು ಮಾಡಿದಂತಾಗುತ್ತದೆ ಎಂದು ಹುದಿಕೇರಿಯ ಪ್ರಮುಖರಾದ ಸಿ.ಕೆ. ಕಾಳಯ್ಯ ಹೇಳಿದ್ದಾರೆ. ಈಗ ನಿರ್ಮಿಸುತಿರುವ ಹೊಸ ತಂಗುದಾಣದ ಎದುರಿನ 20 ಅಡಿ ಅಂತರದಲ್ಲಿ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಇದ್ದು ಪ್ರಯಾಣಿಕರಿಗೆ ಸುರಕ್ಷಿತ ಜಾಗವಾಗಿರುವದಿಲ್ಲ, ಪ್ರಯಾಣಿಕರಿಗೆ ಟ್ರಾನ್ಸ್‍ಫಾರ್ಮರ್‍ವಿರುವದರಿಂದ 2 ಕಡೆಯ ರಸ್ತೆ ಹಾಗೂ ಮಂದೆ ನೋಡಲು ತಡೆಯಾಗಿರುತ್ತದೆ. ಹೊಸ ತಂಗುದಾಣದ ಕಾಮಗಾರಿಯನ್ನು ಸ್ಥಗಿತ ಮಾಡಿ ಹಳೆಯದನ್ನೆ ದುರಸ್ತಿಗೊಳಿಸುವದು ಸೂಕ್ತ ಎಂದು ಸಿ.ಕೆ. ಕಾಳಯ್ಯ ಆಗ್ರಹಿಸಿದ್ದಾರೆ.