ಮಡಿಕೇರಿ, ಮಾ. 20: 2018-19ನೇ ಶೈಕ್ಷಣಿಕ ಸಾಲಿನ ದಾಖಲಾತಿ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮಾರ್ಗಸೂಚಿಯ ಅನ್ವಯ 2018-19ನೇ ಶೈಕ್ಷಣಿಕ ಸಾಲಿನ ಕೊನೆಯ ಕರ್ತವ್ಯದ ದಿನ ತಾ. 19ಕ್ಕೆ ಮುಕ್ತಾಯಗೊಂಡಿದೆ. ಇದೀಗ ತಾನೇ ತಾ. 20 ರಿಂದ ಮೇ 19ರವರೆಗೆ ಬೇಸಿಗೆ ರಜೆಯನ್ನು ಘೋಷಿಸಲಾಗಿದೆ.

ಬೇಸಿಗೆ ರಜೆಯ ನಂತರ ಪದವಿ ಪೂರ್ವ ಕಾಲೇಜುಗಳು ದ್ವಿತೀಯ ಪಿಯುಸಿ ತರಗತಿಗಳೊಂದಿಗೆ ಮೇ 20 ರಿಂದ ಪ್ರಾರಂಭವಾಗುತ್ತದೆ. ಈಗಾಗಲೇ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಘೋಷಿಸಲಾಗಿದ್ದು, ಈ ವೇಳಾಪಟ್ಟಿಯನ್ನು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಲು ಪ್ರಾಂಶುಪಾಲರು ಕ್ರಮ ವಹಿಸಲು ಇಲಾಖೆ ಸೂಚಿಸಿದೆ.

2019-20ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.