ಮಡಿಕೇರಿ, ಮಾ. 20: ವಿದ್ಯುತ್ ಇಲಾಖೆಯ ಮಾರ್ಗದಾಳೊಬ್ಬರು ಅಕ್ರಮವಾಗಿ ವಿದ್ಯುತ್ ಗುತ್ತಿಗೆ ನಿರ್ವಹಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಲೈಸೆನ್ಸ್ಡ್ ವಿದ್ಯುತ್ ಗುತ್ತಿಗೆದಾರರ ಸಂಘ ಆರೋಪಿಸಿದೆ.
ಸಂಘದ ಅಧ್ಯಕ್ಷ ಕೆ.ಬಿ.ಪೂಣಚ್ಚ ಹಾಗೂ ಕಾರ್ಯದರ್ಶಿ ಪಿ.ಎನ್. ರವಿಚಂದ್ರ ಇವರುಗಳು ಲಿಖಿತ ಹೇಳಿಕೆ ನೀಡಿ ವೀರಾಜಪೇಟೆ ತಾಲೂಕಿನ ಬಾಡಗ ಗ್ರಾಮದ ಬಿ.ಎಂ. ಐಯ್ಯಪ್ಪ ಎಂಬವರ ವಿದ್ಯುತ್ ಕೆಲಸವನ್ನು ಪಿ. ಕೃಷ್ಣಮೂರ್ತಿ ಎಂಬ ಮಾರ್ಗದಾಳು ಅಕ್ರಮವಾಗಿ ಪಡೆದು ವಂಚಿಸಿರುವದಾಗಿ ಹೇಳಿದ್ದಾರೆ. ಈ ವ್ಯಕ್ತಿಯನ್ನು ಅಮಾನತ್ತು ಅಥವಾ ವರ್ಗಾವಣೆಗೊಳಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.