ಮಡಿಕೇರಿ, ಮಾ. 20: ಭಾಗಮಂಡಲದ ಶ್ರೀ ಕಾಶಿಮಠ ಶಾಖೆಯಲ್ಲಿ ತಾ. 22 ರಂದು (ನಾಳೆ) ವಾರಣಾಸಿಯ ಶ್ರೀ ಕಾಶಿ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಭಾಗಮಂಡಲದಲ್ಲಿ ವಾಸ್ತವ್ಯ ಹೂಡು ವದರೊಂದಿಗೆ, ಪೂಜಾಧಿಗಳಲ್ಲಿ ಪಾಲ್ಗೊಂಡು ಭಕ್ತ ಜನತೆಯನ್ನು ಆಶೀರ್ವದಿಸಲಿದ್ದಾರೆ. ಇದೇ ವೇಳೆ ಅವರು ತಾ. 22 ರಂದು ಹಗಲು 11 ಗಂಟೆಗೆ ಶ್ರೀ ಮಠಕ್ಕೆ ಆಗಮಿಸುವ ಮೂಲಕ ನವೀಕೃತ ಮಠವನ್ನು ಉದ್ಘಾಟಿಸಲಿದ್ದಾರೆ. (ಮೊದಲ ಪುಟದಿಂದ) 1957ರಲ್ಲಿ ಪ್ರಾರಂಭಗೊಂಡಿರುವ ಈ ಮಠ ಇದೀಗ ನವೀಕರಣ ಗೊಂಡಿದ್ದು, ನಾಳೆ ಲೋಕಾರ್ಪಣೆಯಾಗಲಿದೆ.ಏಪ್ರಿಲ್ 6 ರಂದು ಚಂದ್ರಮಾನ ಯುಗಾದಿ ಉತ್ಸವದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಅಂದಿನಿಂದ ವಸಂತೋತ್ಸವ ಸೇವಾದಿ ನೆರವೇರಲಿದೆ. ಏ. 7 ರಂದು ಅಶ್ವವಾಹನ ಸೇವೆ, ಏ. 8 ರಂದು ಐರಾವತ ಸೇವೆ, ಏ. 9 ಶೇಷವಾಹನ ಸೇವೆ, ಏ. 10 ರಂದು ರಜತ ಗರುಡ ವಾಹನ ಸೇವೆ, ಏ. 11 ರಂದು ಹಂಸವಾಹನ ಸೇವೆ ಏರ್ಪಡಿಸಲಾಗಿದೆ.
ಈ ಎಲ್ಲಾ ಪೂಜಾ ಸೇವೆಗಳಲ್ಲಿ ಸ್ವಾಮೀಜಿ ಪಾಲ್ಗೊಳ್ಳುವದರೊಂದಿಗೆ ಏ. 12 ರಂದು ಹನುಮಂತ ಸೇವೆ, ಏ. 13 ರಥ ವಾಹನ ಸೇವೆ, ಏ. 14 ರಂದು ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಪೂಜಾಧಿಗಳೊಂದಿಗೆ ಅಭಿಷೇಕ ಸುವರ್ಣ ಗರುಡ ವಾಹನ ಸೇವೆ ಇತ್ಯಾದಿ ಏರ್ಪಡಿಸಲಾಗಿದೆ. ಏ. 15 ರಂದು ಪಲ್ಲಕ್ಕಿ ಸೇವೆ ನಡೆಯಲಿದ್ದು, ಏ. 16 ರಂದು ಏಕಾದಶಿ ಪೂಜೆ ನಡೆಯಲಿದೆ. ಏ. 17 ರಂದು ಸೂರ್ಯ ವಾಹನ ಸೇವೆ, ಏ. 18 ರಂದು ಹನುಮಂತ ವಾಹನ ಸೇವೆ, ಏ. 20 ರಂದು ಏಕಾಹ ಭಜನಾ ಮಹೋತ್ಸವ ಜರುಗಲಿದ್ದು, ಈ ಎಲ್ಲಾ ಸಂದರ್ಭ ಶ್ರೀ ಮಠದಲ್ಲಿ ನಿತ್ಯವೂ ಭಜನೆ ಇನ್ನಿತರ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.