*ಗೋಣಿಕೊಪ್ಪಲು, ಮಾ. 20: ನಾಗರಹೊಳೆ ಬುಡಕಟ್ಟು ಜನರ ದೇವರ ಸಮಿತಿ ವತಿಯಿಂದ ನಡೆಯುವ ಶ್ರೀ ತಿರುಮಲ ಬರಗೂರು, ರಾಸೆ, ಐಗೋಲ್ಲಿ, ಜಾಡಳ ದೇವರ ಉತ್ಸವ ತಾ. 25 ಹಾಗೂ 26 ರಂದು ನಡೆಯಲಿವೆ. ನಾಗರಹೊಳೆ ಅರಣ್ಯ ವ್ಯಾಪ್ತಿಯ ನಾಲ್ಕೇರಿ, ಗೋಣಿಗದ್ದೆಯಲ್ಲಿ ಈ ಉತ್ಸವ ನಡೆಯಲಿದೆ. ತಾ. 25 ರಂದು ಬೆಳಿಗ್ಗೆ ಹತ್ತು ಗಂಟೆಗೆ ಗಣಪತಿ ಹೋಮ, 12 ಗಂಟೆಗೆ ಮಹಾಪೂಜೆ, ತಾ. 26 ರಂದು ಬೆಳಿಗ್ಗೆ 10 ಗಂಟೆಯಿಂದ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.