*ಗೋಣಿಕೊಪ್ಪಲು, ಮಾ. 20: ತಿತಿಮತಿ ಕರಡಿಕೊಪ್ಪ ಮುತ್ತಪ್ಪ ದೇವರ ವಾರ್ಷಿಕೊತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಭಕ್ತಾದಿಗಳು ಮುತ್ತಪ್ಪ ದೇವರಿಗೆ ವಿವಿಧ ಹರಕೆಗಳನ್ನು ಸಲ್ಲಿಸಿದರು. ಮೂರು ದಿನಗಳು ಮುತ್ತಪ್ಪನ ವೆಳ್ಳಾಟಂ, ವಸೂರಿಮಲೆ, ಗುಳಿಗ, ಕುಟ್ಟಿಚಾತ, ಕಾರನೂರ್ ತೆರೆಗಳು ನಡೆದವು.
ಗಣಪತಿ ದೇವಸ್ಥಾನದಿಂದ ವಾದ್ಯದೊಂದಿಗೆ ಕಲಶ ಮೆರವಣಿಗೆ ನಡೆಸಿದರು. ಮುಖ್ಯ ಬೀದಿಯಿಂದ ಮುತ್ತಪ್ಪ ದೇವಸ್ಥಾನದವರೆಗೆ ಸಾಂಪ್ರದಾಯಕ ಉಡುಪಿನಲ್ಲಿ ನೂರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ತೊಡಗಿಸಿಕೊಂಡರು.
ದೇವಸ್ಥಾನದ ಆವರಣದಲ್ಲಿ ಧ್ವಜಾರೋಹಣ ಬಳಿಕ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಯಿತು. ಮೂರು ದಿನಗಳು ಆಡಳಿತ ಮಂಡಳಿ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.