ಮಡಿಕೇರಿ, ಮಾ. 20: ಜನರಲ್ ತಿಮ್ಮಯ್ಯರವರ 113ನೇ ಜನ್ಮದಿನಾಚರಣೆಯನ್ನು ತಾ.31 ರಂದು ನಗರದ ತಿಮ್ಮಯ್ಯ ಮ್ಯೂಸಿಯಂನಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ನಡೆಸಲಾಗುವದು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ಅಧ್ಯP್ಷÀ ಕರ್ನಲ್ ಕೆ.ಸಿ.ಸುಬ್ಬಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತದ ಸಹಯೋಗದೊಂದಿಗೆ ಸರಳವಾಗಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದೆ. ಅಂದಿನ ಕಾರ್ಯಕ್ರಮಕ್ಕೆ ಜಿಲ್ಲೆಯ ಜನತೆ ಹಾಗೂ ಮಾಜಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮ್ಯೂಸಿಯಂ ಕಾಮಗಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಯೋಚಿಸಿದ ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ. 5.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿತ್ತು. ಅದರಲ್ಲಿ 3.5 ಕೋಟಿ ಬಂದಿದೆ. ಮ್ಯೂಸಿಯಂ ಅಂದ್ರೆ ಕೇವಲ ಗೋಡೆ, ಮನೆಯಲ್ಲ. ಇಲ್ಲಿ ತಿಮ್ಮಯ್ಯ ಅವರ ಜೀವನ ಚರಿತ್ರೆಯನ್ನು ಚಿತ್ರಗಳ ರೂಪದಲ್ಲಿ ಬರೆಯಲಾಗಿದೆ. ಇದನ್ನು ತೆರೆದಿಡುವ ಪ್ರಯತ್ನಗಳು ನಡೆಯುತ್ತಿವೆ. ನಮಗೆ ರಕ್ಷಣಾ ಪಡೆಯ ಸಂಪೂರ್ಣ ಸಹಕಾರ ದೊರೆಯುತ್ತಿದೆ ಎಂದರು.

ಮ್ಯೂಸಿಯಂನಲ್ಲಿ ಭಾರತೀಯ ಸೇನೆಯ ಯೋಧರು ಬಳಸಿದ 25 ಶಸ್ತ್ರಾಸ್ತ್ರಗಳು, 50ರಿಂದ 60 ವರ್ಷಗಳ ಹಿಂದಿನ ಲೈಟ್ ಮಿಷನ್ ಗನ್, ಮೀಡಿಯಂ ಮಿಷನ್ ಗನ್, ಸೆಲ್ಫ್ ಲೋಡಿಂಗ್ ರೈಫಲ್‍ಗಳು, 7.62 ಮತ್ತು 303 ಬ್ಯಾರಲ್ ರೈಫಲ್‍ಗಳು, ರಾಕೆಟ್ ಲಾಂಚರ್, 32 ಎಂ.ಎಂ.ರೈಫಲ್, ಪಾಯಿಂಟ್ 38 ರೈಫಲ್‍ಗಳು ಸಾರ್ವಜನಿಕರನ್ನು ಆಕರ್ಷಿಸಲಿದೆ. ಬೋಫೋರ್ಸ್ ಗನ್, ಏರ್‍ಕ್ರಾಫ್ಟ್ ಮ್ಯೂಸಿಯಂ ಮಾತ್ರ ನಮ್ಮ ಕೈಸೇರಿಲ್ಲ. ಮುಂದಿನ ದಿನದಲ್ಲಿ ಇವು ನಮ್ಮ ಕೈ ಸೇರುವ ಭರವಸೆ ಇದೆ ಎಂದು ಮಾಹಿತಿ ನೀಡಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೆÇೀರಂ ಸಂಚಾಲಕ ನಿವೃತ್ತ ಮೇಜರ್ ಬಿ.ಎ.ನಂಜಪ್ಪ ಮಾತನಾಡಿ, ತಿಮ್ಮಯ್ಯ ಅವರ ಮನೆಯ ಕೆಲಸಗಳು ಪೂರ್ಣಗೊಂಡಿದೆ. ಆದರೆ ಹೊರಗಿನ ಕೆಲಸಗಳು ಬಾಕಿ ಉಳಿದುಕೊಂಡಿದೆ. ಮ್ಯೂಸಿಯಂನ ಒಳಭಾಗದಲ್ಲಿರುವ ಪೀಠೋಪಕರಣಗಳನ್ನು ರೋಸ್‍ವುಡ್‍ನಲ್ಲಿ ಮಾಡಲಾಗಿದೆ.

ವಿವಿಧ ಕಡೆಗಳಲ್ಲಿ ಇದ್ದ ತಿಮ್ಮಯ್ಯ ಅವರ ದಾಖಲೆಯನ್ನು ಹುಡುಕಿ ತೆಗೆದು ಅದನ್ನು ಇಲ್ಲಿ ಪ್ರದರ್ಶಿಸುವ ಪ್ರಯತ್ನ ನಡೆದಿದೆ. ತಿಮ್ಮಯ್ಯ ಅವರನ್ನು ಮಾದರಿಯಾಗಿಟ್ಟುಕೊಂಡು ಹೆಚ್ಚಿನ ಸೈನಿಕರು ಜಿಲ್ಲೆಯಿಂದ ಸೇನೆಗೆ ತೆರಳಲಿ ಎಂಬ ಉದ್ದೇಶದಿಂದ ತಿಮ್ಮಯ್ಯ ಮ್ಯೂಸಿಯಂ ಕಾರ್ಯ ನಡೆದಿದೆ ಎಂದರು. ಈ ಸಂದರ್ಭ ಫೋರಂನ ಕಾರ್ಯದರ್ಶಿ ಉಳ್ಳಿಯಡ ಪೂವಯ್ಯ, ರಾಜ ಮಾದಪ್ಪ, ಕಲ್ಮಾಡಂಡ ನವೀನ್ ಇದ್ದರು.