ಮಡಿಕೇರಿ, ಮಾ.20: ಕೊಡಗು ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ವಿವಿಧ ಕಡೆ ದಾಳಿ ನಡೆಸಿ 19.675 ಲೀ. ಮದ್ಯ ಮತ್ತು 15 ಲೀ. ಸೇಂದಿ ಹಾಗೂ 14 ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು, 3- ಘೋರ ಪ್ರಕರಣ, 16 ಇತರೆ ಪ್ರಕರಣಗಳು ದಾಖಲಾಗಿದೆ. ಹಾಗೆಯೇ ಒಂದು ಆಟೋರಿಕ್ಷಾ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಅಂದಾಜು ವೆಚ್ಚ ರೂ. 85,363ಗಳಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರು ತಿಳಿಸಿದ್ದಾರೆ.