ಸುಂಟಿಕೊಪ್ಪ, ಮಾ. 20: ಬೆಂಗ ಳೂರಿನ ಶಿಕ್ಷಣ ಜ್ಞಾನ ಮಾಸ ಪತ್ರಿಕೆ ವತಿ ಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಶಿಕ್ಷಕರಿಗೆ ಕೊಡಲ್ಪ ಡುವ ಪ್ರಸಕ್ತ ಸಾಲಿನ ಶಿಕ್ಷಣ ಜ್ಞಾನ ಪ್ರಶಸ್ತಿಗೆ ಕೊಡಗಿನ ಇಬ್ಬರು ಶಿಕ್ಷಕರಿಗೆ ಲಭಿಸಿದೆ.
ಶಿಕ್ಷಣ ಜ್ಞಾನ ಮಾಸಪತ್ರಿಕೆ ವತಿ ಯಿಂದ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ ಮತ್ತು ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಾಸುರ ಇ. ನಂದ ಅವರಿಗೆ ಜ್ಞಾನಜ್ಯೋತಿ ಪ್ರಶಸ್ತಿ ಹಾಗೂ ಗೌಡಳ್ಳಿ ಪ್ರೌಢಶಾಲಾ ಗಣಿತ ಶಿಕ್ಷಕ ಬಿ.ಬಿ. ದಿನೇಶ್ ಅವರಿಗೆ ಜ್ಞಾನಸಿಂಧು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶಿಕ್ಷಣ ಜ್ಞಾನ ಮಾಸ ಪತ್ರಿಕೆಯ ಸಂಪಾದಕ ಎಸ್.ವಿ. ನಾಗರಾಜ್ ಹಾಗೂ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ನಿವೃತ್ತ ಪ್ರಾಂಶುಪಾಲ ಎಸ್. ದೊಡ್ಡಮಲ್ಲಪ್ಪ ಈ ಇಬ್ಬರು ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕ ಪಾಸುರ ಇ. ನಂದ ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉತ್ತಮವಾಗಿ ಫುಟ್ಬಾಲ್ ತರಬೇತುಗೊಳಿಸಿ ಅವರನ್ನು ನಿರಂತರವಾಗಿ ರಾಜ್ಯ ಹಾಗೂ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಭಾಗವಹಿಸುವ ಮೂಲಕ ಶಾಲೆಗೆ ಕೀರ್ತಿ ತಂದಿರುವದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸಿ.ಎ. ಗೀತಾ ತಿಳಿಸಿದ್ದಾರೆ.
ಗೌಡಳ್ಳಿ ಪ್ರೌಢಶಾಲಾ ಗಣಿತ ಶಿಕ್ಷಕ ಬಿ.ಬಿ. ದಿನೇಶ್ ಅವರು ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಶಿಕ್ಷಕರಿಗೆ ನಡೆಯುವ ಜಿಲ್ಲಾಮಟ್ಟದ ಗಣಿತ ಮತ್ತು ಭೌತಶಾಸ್ತ್ರ ವಿಷಯ ಸಂಪದೀಕರಣ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡುವದರೊಂದಿಗೆ ರಾಜ್ಯಮಟ್ಟದ ವಿಷಯ ಸಂಪದೀಕರಣ ಸಂಪನ್ಮೂಲ ಶಿಕ್ಷಕರಾಗಿ ಉತ್ತಮ ತರಬೇತಿ ನೀಡುತ್ತಿರುವದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.