*ಗೋಣಿಕೊಪ್ಪಲು, ಮಾ. 19: ಹರಿಶ್ಚಂದ್ರಪುರ ಕೀಲೇರಿ ಮುತ್ತಪ್ಪ ಮಠಪುರ ಟ್ರಸ್ಟ್ ವತಿಯಿಂದ ಶ್ರೀ ಮುತ್ತಪ್ಪ ದೇವರ ಉತ್ಸವ ತಾ. 29 ರಿಂದ 31 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ತಾ. 29 ರಂದು ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, ಪೂಜಾ ಕಾರ್ಯದ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ.
ತಾ. 30 ರಂದು ಸಂಜೆ 6.30 ಗಂಟೆಗೆ ಕಾರಣೋರ್ ವೆಳ್ಳಾಟ್ಟಂ, 7.30 ಗಂಟೆಗೆ ಮುತ್ತಪ್ಪನ್ ವೆಳ್ಳಾಟ್ಟಂ, 8 ಗಂಟೆಗೆ ಗುಳಿಗನ್ ವೆಳ್ಳಾಟಂ, ರಾತ್ರಿ 10 ಗಂಟೆಗೆ ಕಂಡಾಕರ್ಣನ್ ವೆಳ್ಳಾಟ್ಟಂ, 10.30 ಗಂಟೆಗೆ ವಸೂರಿಮಾಲಾ ವೆಳ್ಳಾಟ್ಟಂ, 11 ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟ್ಟಂ, 11.30 ಗಂಟೆಗೆ ಪೋದಿ ವೆಳ್ಳಾಟ್ಟಂ, ಮಧ್ಯರಾತ್ರಿ 12 ಗಂಟೆಗೆ ತಿರುವಪ್ಪನ ವೆಳ್ಳಾಟ್ಟಂ ಮತ್ತು 12.30 ಗಂಟೆಗೆ ಕಲಶ ಸ್ವಾಗತಂ ನಡೆಯಲಿದೆ. ತಾ. 31 ರಂದು ಪ್ರಾತಃ ಕಾಲ 2 ಗಂಟೆಗೆ ಗುಳಿಗನ್ ತೆರೆ, 3 ಗಂಟೆಗೆ ಕಂಡಾಕರ್ಣನ್ ತೆರೆ, 4.30 ಗಂಟೆಗೆ ತಿರುವಪ್ಪನ್ ತೆರೆ, 5 ಗಂಟೆಗೆ ಪೋದಿ ತೆರೆ, 5.30 ಗಂಟೆಗೆ ಕಾರಣೋರ್ ತೆರೆ, 6 ಗಂಟೆಗೆ ವಸೂರಿಮಾಲಾ ತೆರೆ ಮತ್ತು 6.30 ಗಂಟೆಗೆ ವಿಷ್ಣುಮೂರ್ತಿ ತೆರೆ ನಡೆಯಲಿದೆ.