ಚೆಟ್ಟಳ್ಳಿ, ಮಾ. 19: ಕುಶಾಲನಗರದ ಲುಕ್ಸ್ ಬ್ಯೂಟಿ ಕೇರ್ ವತಿಯಿಂದ ಪ್ರಥಮ ವರ್ಷದ ಫೈವ್ ಸ್ಟಾರ್ ಹೇರ್ ಸ್ಟೈಲ್ ಚಾಂಪಿಯನ್ ಶಿಪ್ ನಡೆಯಿತು.
ಕುಶಾಲನಗರದ ಬಸವೇಶ್ವರ ಬಡಾವಣೆಯ ನಿವಾಸಿ ಮನು ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಜ್ಯಮಟ್ಟದ ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ವಿವಿಧ ರೀತಿಯ ಕೇಶ ವಿನ್ಯಾಸಕರು ಪಾಲ್ಗೊಂಡಿದ್ದು, ಇದರಲ್ಲಿ ಮನು ಪ್ರಥಮ ಸ್ಥಾನಗಳಿಸಿದ್ದಾರೆ.
ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮವಾದ ವೇದಿಕೆಯನ್ನು ಸೃಷ್ಟಿಸಿದ್ದು, ಇಂತಹ ವೇದಿಕೆಗಳು ನಮ್ಮಂತಹ ಯುವಕರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ ಎಂದು ಮನು ತಿಳಿಸಿದ್ದಾರೆ.
ಲುಕ್ಸ್ ಬ್ಯೂಟಿ ಕೇರ್ ಮಾಲೀಕ ಲೋಕೇಶ್ ಹಾಗೂ ಬೇರೆ ಜಿಲ್ಲೆಗಳು ಸೇರಿದಂತೆ ಕೊಡಗಿನ ಪ್ರತಿಭಾವಂತ ಕೇಶ ವಿನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.