ಸುಂಟಿಕೊಪ್ಪ, ಮಾ.19 : ಗರಗಂದೂರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಚಾಮುಂಡೇಶ್ವರಿ ಪರಿವಾರ ದೇವರುಗಳÀ ಮಹಾಚಂಡಿಕಾ ಹೋಮ ಪುನರ್ ಪ್ರತಿಷ್ಟಾಪನೆ ಕಾರ್ಯಕ್ರಮವು ತಾ. 23ರಂದು ನಡೆಯಲಿದೆ.

ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಚಾಮುಂಡೇಶ್ವರಿ ಪರಿವಾರ ದೇವರುಗಳÀ ಮಹಾಚಂಡಿಕಾ ಹೋಮ ಪುನರ್ ಪ್ರತಿಷ್ಟಾಪನೆ ಅರ್ಚಕ ದಿವಾಕರ ಭಟ್ ಹಾಗೂ ಕೇರಳದ ಕಾಸರಗೋಡಿನ ತಂತ್ರಿಗಳಿಂದ ಮಹಾ ಚಂಡಿಕಾ ಹೋಮ, ಮಲ್ಲ್ಲಿಕಾರ್ಜುನ ದೇವರಿಗೆ ಮಹಾ ರುದ್ರಾಭಿಷೇಕ ಉಪದೇವತೆಗಳಾದ ಚಾಮುಂಡೇಶ್ವರಿ ಶ್ರೀ ನಾಗ, ಗುಳಿಗ, ಕೊರತಿ, ಮುನೀಶ್ವರ ಮಾರಿಯಮ್ಮ, ದೇವರ ಪುನರ್ ಪ್ರತಿಷ್ಟಾಪನೆ ಕಾರ್ಯಗಳು ನಡೆಯಲಿದೆ.

ತಾ.29ರಂದು ವಾರ್ಷಿಕ ಮಹೋತ್ಸವ ಅಂಗವಾಗಿ ಬೆಳಿಗ್ಗೆ 5.30ಕ್ಕೆ ಸ್ಥಳ ಶುಧ್ದಿ ಪುಣ್ಯಾಹ 6.10ಕ್ಕೆ ಧ್ವಜರೋಹಣ 7 ಗಂಟೆಗೆ ಮಲ್ಲಿಕಾರ್ಜುನ ಮತ್ತು ಪರಿವಾರ ದೇವರ ಪೂಜೆ 8.30ಕ್ಕೆ ಶ್ರೀ ಚಾಮುಂಡೇಶ್ವರಿ ಪರಿವಾರ ದೇವರ ಪೂಜೆ, 9.30ಕ್ಕೆ ಕುಟ್ಟಿಚಾತ ಪೂಜೆ ಮತ್ತು ಹರಕೆ. 10ಗಂಟೆಗೆ ಮಾರಿಯಮ್ಮ ದೇವರ ಪೂಜೆ ಮತ್ತು ಹರಕೆ, 10.30ಕ್ಕೆ ಗುಳಿಗ ಮತ್ತು ಕೊರತಿ ದೇವರ ಪೂಜೆ, 12 ಗಂಟೆಗೆ ಮಹಾ ಮಂಗಳಾರತಿ, 12.30ಕ್ಕೆ ಪ್ರಸಾದ ವಿತರಣೆ ಮಧ್ಯಾಹ್ನ 1 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ದೆವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.