ಜಲದಾಹ...
ನಾಪೆÇೀಕ್ಲು, ಮಾ. 19: ಸಮೀಪದ ಬೇತು ಗ್ರಾಮದಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಸ್ಥಿತಿ ಉಂಟಾಗಿದೆ. ಟ್ಯಾಂಕ್‍ಗೆ ನೀರು ಪೂರೈಕೆ ಮಾಡುವ ಪೈಪ್ ಕಡಿತಗೊಂಡಿದ್ದು, ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಗ್ರಾಮದ ಹಲವು ಮಂದಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಸ್ವಂತ ಬಾವಿಗಳನ್ನು ನಿರ್ಮಿಸಿಕೊಂಡಿದ್ದರೂ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಪಂಚಾಯಿತಿ ಸರಬರಾಜು ಮಾಡುವ ನೀರಿಗಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇತು ಗ್ರಾಮದ ಜನರ ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ಹಲವು ವರ್ಷಗಳ ಹಿಂದೆ ಸ್ವಜಲಧಾರಾ ಯೋಜನೆಯಡಿ ಬೃಹತ್ ಟ್ಯಾಂಕ್ ಅನ್ನು ನಿರ್ಮಿಸಲಾಯಿತು. ಈ ಟ್ಯಾಂಕ್‍ಗೆ ನೀರು ಪೂರೈಕೆಗಾಗಿ ಕಕ್ಕಬ್ಬೆ ಹೊಳೆಯ ಬದಿಯಲ್ಲಿ ಜಾಕ್‍ವೆಲ್ ನಿರ್ಮಿಸಿ ನೀರು ಪೂರೈಕೆ ಕೈಗೊಳ್ಳಲಾಯಿತು. ಯೋಜನೆಯಿಂದ ಬೇತು ಗ್ರಾಮಸ್ಥರಿಗೆ ಪ್ರಯೋಜನವಾಯಿತಾದರೂ ಪದೇಪದೇ ಪೈಪ್‍ಲೈನ್ ದುರಸ್ಥಿಯಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದೀಗ ಕಳೆದ ಆರು ತಿಂಗಳಿಂದ ನೀರು ಪೂರೈಕೆ ಆಗದೇ ಜನರು ಬವಣೆ ಪಡುವಂತಾಗಿದೆ. ಮಳೆಯ ಪ್ರಮಾಣ ಇಳಿಮುಖವಾಗಿರುವದರಿಂದ ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿಮುಖಗೊಂಡಿದೆ. ಪರಿಣಾಮ ಹಲವರು ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ. ಈ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕೊಳವೆ ಬಾವಿಗಳಿದ್ದರೂ ಪ್ರಯೋಜನವಿಲ್ಲದಾಗಿದೆ. ಹಲವು ಕೊಳವೆ ಬಾವಿಗಳು ಉಪಯೋಗವಿಲ್ಲದೇ ಮೂಲೆಗುಂಪಾಗಿವೆ.
ಸ್ಥಗಿತಗೊಂಡ ಕಾಮಗಾರಿ: ಪೈಪ್‍ಲೈನ್‍ನಲ್ಲಿ ಪದೇಪದೇ ದೋಷ ಕಾಣಿಸಿಕೊಂಡು ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವದನ್ನು ತಪ್ಪಿಸಲು ಗ್ರಾಮ ಪಂಚಾಯಿತಿ ವತಿಯಿಂದ ಕಕ್ಕಬೆ ಹೊಳೆಯ ಬದಿಯಲ್ಲಿ ಜಾಕ್‍ವೆಲ್ ನಿರ್ಮಿಸಲು ಯೋಜನೆ ಹಮ್ಮಿಕೊಳ್ಳ ಲಾಯಿತು. ರಸ್ತೆಯ ಬದಿಯಲ್ಲಿ ಪೈಪ್‍ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲು ಜಾಕ್‍ವೆಲ್ ಮಾತ್ರ ನಿರ್ಮಾಣಗೊಂಡು ಕಾರಣಾಂತರಗಳಿಂದ ಯಾವ ಕೆಲಸವೂ ಆರಂಭಗೊಳ್ಳದೆ ಗ್ರಾಮಸ್ಥರು ಸಂಕಷ್ಟ ಎದುರಿಸುವಂತಾಗಿದೆ.