ಕೂಡಿಗೆ, ಮಾ. 19: ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕುಶಾಲನಗರ ಇಲ್ಲಿನ ಎನ್.ಎಸ್.ಎಸ್. ವಿಭಾಗದ ವಿದ್ಯಾರ್ಥಿಗಳು ಒಂದು ದಿನದ ಎನ್.ಎಸ್.ಎಸ್. ಶಿಬಿರ ಕೂಡಿಗೆಯಲ್ಲಿ ನಡೆಯಿತು.

ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಮೊದಲು ಕೂಡಿಗೆ ಡೈರಿ ಹಾಗೂ ಕೂಡುಮಂಗಳೂರು ಪಂಚಾಯಿತಿಯಲ್ಲಿ ಗ್ರಾಮ ಮಾಹಿತಿಯನ್ನು ಒದಗಿಸಲಾಯಿತು. ನಂತರ ಕೂಡಿಗೆ ರಸ್ತೆಯ ದುರಸ್ತಿ, ಡಯಟ್ ಮೈದಾನ ಸ್ವಚ್ಛತೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್. ಬಗ್ಗೆ ಮಾಹಿತಿಯನ್ನು ಕಾರ್ಯಕ್ರಮದ ಅಧಿಕಾರಿ ಡಾ. ಸದಾಶಿವಯ್ಯ ಎಸ್ ಪಲ್ಲೇದ ನೀಡಿದರು. ಪ್ರಾಂಶುಪಾಲ ವಲ್ಟರ್ ಡಿ ಮೇಲು ಅವರು ಶುಭಾಶಯ ನುಡಿಯನ್ನು ಆಡಿದರು. ಕಾರ್ಯಕ್ರಮದಲ್ಲಿ ಡಯಟ್‍ನ ಉಪನ್ಯಾಸಕ ಸಿದ್ಧೇಶ, ನಳಿನಾಕ್ಷಿ, ಗಾಯತ್ರಿ, ಪ್ರಾಥಮಿಕ ಶಾಲಾ ಶಿಕ್ಷಕರಾದ ದೇವಕಿ ಮತ್ತು ಹೇಮಲತಾ ಅವರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಅನೇಕ ಸಂದೇಶ ನೀಡುವಂತಹ ಕಿರು ನಾಟಕಗಳನ್ನು ಹಾಗೂ ನೃತ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.