ಕುಶಾಲನಗರ, ಮಾ. 18: ಅರೆ ವೈದೈಕೀಯ ಶಿಕ್ಷಣ ಮಂಡಳಿಯ ಆಶ್ರಯದಲ್ಲಿ 2017 ರ ಅಕ್ಟೋಬರ್ನಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಡಿಪ್ಲೋಮಾ ಇನ್ ಆಪ್ತಮಾಲಜಿ ಟೆಕ್ನಾಲಜಿ ವಿಭಾಗದಲ್ಲಿ ಎ.ಬಿ.ದಿವ್ಯಾ ಶೇ. 85 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಎ.ಬಿ.ದಿವ್ಯಾ ಕುಶಾಲನಗರದ ವಿದ್ಯಾರ್ಥಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಬಸವನಹಳ್ಳಿ ನಿವಾಸಿಗಳಾದ ಬೋಜಪ್ಪ ಮತ್ತು ಕಮಲ ದಂಪತಿಗಳ ಪುತ್ರಿ.