ಮಡಿಕೇರಿ, ಮಾ. 18: ಮಡಿಕೇರಿ ತಾಲೂಕು ಸಾಹಿತ್ಯ ಪರಿಷತ್ತು ವತಿಯಿಂದ 10 ನೇ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.

ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಾರಿಯ ಸಮ್ಮೇಳನವನ್ನು ಸರಳ ಹಾಗೂ ಅರ್ಥ ಪೂರ್ಣವಾಗಿ ಆಚರಿಸುವಂತೆ ತೀರ್ಮಾನಿಸ ಲಾಯಿತು. ಪ್ರಕೃತಿ ವಿಕೋಪಕ್ಕೆ ಸಿಲುಕಿ ದುಃಖದಲ್ಲಿರುವ ಸಂತ್ರಸ್ತರಿಗೆ ಧೈರ್ಯ ತುಂಬುವ ಹಾಗೂ ಅವರುಗಳನ್ನು ಒಂದೇ ವೇದಿಕೆಯಡಿ ಸೇರಿಸುವ ಉದ್ದೇಶ ದೊಂದಿಗೆ ಮಕ್ಕಂದೂರು ಗ್ರಾಮದಲ್ಲಿ, ಅಲ್ಲಿನ ಪ್ರಮುಖರು, ಊರಿನವರ ಸಹಕಾರದೊಂದಿಗೆ ಆಚರಿಸುವ ನಿಟ್ಟಿನಲ್ಲಿ ಚರ್ಚಿಸ ಲಾಯಿತು. ಈ ಸಂಬಂಧ ಮಕ್ಕಂದೂರಿನಲ್ಲಿ ಅಲ್ಲಿನ ಪ್ರಮುಖರ ಸಮ್ಮುಖದಲ್ಲಿ ಸಭೆ ನಡೆಸಿ, ಚರ್ಚಿಸಿ ಮುಂದಡಿಯಿಡುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಇನ್ನಿತರ ಕಾರ್ಯಕ್ರಮ, ವಿಚಾರಗಳ ಬಗ್ಗೆಯೂ ಚರ್ಚಿಸ ಲಾಯಿತು. ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ. ಕೂಡಕಂಡಿ ದಯಾನಂದ, ಬಾಳೆಯಡ ಕಿಶನ್ ಪೂವಯ್ಯ, ನಿರ್ದೇಶಕರುಗಳಾದ ಡಿ.ಹೆಚ್.ಪುಷ್ಪ, ಪಿ.ಪಿ. ಸುಕುಮಾರ್ ಆರ್.ಪಿ. ಚಂದ್ರಶೇಖರ್ ಇದ್ದರು.