ಕೂಡಿಗೆ, ಮಾ. 19: ಕೊಡಗು ಜಿಲ್ಲೆಯ ವಾಲಿಬಾಲ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿ ಹೆಚ್.ಕೆ. ನಾಗೇಶ್, ಕಾರ್ಯದರ್ಶಿ ಗೌತಮ್ ಮೂರ್ನಾಡು ಆಯ್ಕೆಗೊಂಡಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಹೆಚ್.ಕೆ. ನಾಗೇಶ್ ಮಾತನಾಡಿ, ಕೊಡಗು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಮತ್ತು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ ರಾಜ್ಯ ಮಟ್ಟದ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವನ್ನು ಮುಂದಿನ ತಿಂಗಳಲ್ಲಿ ನಡೆಸುವ ಬಗ್ಗೆ ಯೋಜನೆ ಕೈಗೊಳ್ಳಲಾಗಿದೆ ಎಂದರು.

ಆಯ್ಕೆ ಪ್ರಕ್ರಿಯೆಯು ಕೂಡಿಗೆಯ ಗೋಲ್ಡನ್ ಈಗಲ್ ವಾಲಿಬಾಲ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಿತು. ಅಸೋಸಿಯೇಷನ್‍ನ ನಿರ್ದೇಶಕರಾಗಿ ಕೆ.ಎ. ಪೀಟರ್, ಎನ್.ಕೆ. ಚಂದ್ರ, ದಿಲೀಪ್, ಲಾಲು, ಕೆ.ವೈ. ರವಿ, ಸನ್ನಿ, ಸೋಮಶೇಖರ್, ಕೆ.ಕೆ. ನಟೇಶ್‍ಕುಮಾರ್, ಕಿರಣ್, ಕೊಟ್ಟಮುಡಿ ಮೊಹಿದ್ದೀನ್, ಮೂರ್ನಾಡು ಹನೀಫ್ ಮೊದಲಾದವರು ಆಯ್ಕೆಗೊಂಡಿದ್ದಾರೆ.