ಮಡಿಕೇರಿ, ಮಾ. 18: ಸ್ವ ಉದ್ಯೋಗ ಮಾಡಿ ಮಹಿಳೆಯರು ಸಬಲರಾಗಬೇಕು ಎಂದು ಗೋಣಿಕೊಪ್ಪದ ಮಹಿಳಾ ಉದ್ಯಮಿ ಸುಮಿ ಸುಬ್ಬಯ್ಯ ಅಭಿಪ್ರಾಯ ಪಟ್ಟರು. ಇಲ್ಲಿಗೆ ಸಮೀಪದ ಕಾವೇರಿ ಕಾಲೇಜು ಮಹಿಳಾ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮಹಿಳಾ ಘಟಕದ ಪ್ರಾಧ್ಯಾಪಕಿ ಪ್ರೊ. ತೀತಮಾಡ ಪೂವಮ್ಮ ಮಾತನಾಡಿ ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದರು. ಎನ್.ಎಸ್.ಎಸ್ ಯೋಜನಾಧಿಕಾರಿ ಎಂ.ಎನ್. ವನಿತ್‍ಕುಮಾರ್ ಮತ್ತು ಎನ್.ಪಿ.ರೀತಾ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸ್ವಾಗತವನ್ನು ವಿದ್ಯಾರ್ಥಿನಿ ಕಾವೇರಮ್ಮ ಹಾಗೂ ಮೇಗಾ ವಂದಿಸಿದರು.