ಕುಶಾಲನಗರ, ಮಾ. 17: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದ ಹೊಟೇಲ್‍ಗಳಲ್ಲಿ ಅಕ್ರಮ ಮದ್ಯಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಎಂ.ನಾಣಯ್ಯ ಮತ್ತು ಮಥಾಯಿ ಎಂಬವರನ್ನು ಬಂಧಿಸಲಾಗಿದೆ. ಕುಶಾಲನಗರ ಡಿವೈಎಸ್ಪಿ ದಿನಕರ್‍ಶೆಟ್ಟಿ ನೇತೃತ್ವದಲ್ಲಿ ಮುಂಜಾನೆ ದಾಳಿ ಮಾಡಿದ ಪೋಲಿಸರು ಕೈಗಾರಿಕಾ ಬಡಾವಣೆ ಯಲ್ಲಿ ಕಾರ್ಮಿಕರಿಗೆ ಬೆಳ್ಳಂಬೆಳಗ್ಗೆ (ಮೊದಲ ಪುಟದಿಂದ) ಮದ್ಯವಿತರಣೆ ಮಾಡುತ್ತಿದ್ದ ಸಂದರ್ಭ ವಶಕ್ಕೆ ತೆಗೆದುಕೊಂಡಿದ್ದಾರೆ. ಸಿಐ ದಿನೇಶ್‍ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ನಂದೀಶ್, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ದಯಾನಂದ,ಜೋಸೆಫ್, ಪ್ರಕಾಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜೂಜು ಅಡ್ಡೆಗಳು ಹಾಗೂ ಗಾಂಜಾ ಪ್ರಕರಣಗಳು ಅಧಿಕವಾಗಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ತಂಡ ರಚಿಸಲಾಗಿದೆ ಎಂದು ಡಿವೈಎಸ್ಪಿ ದಿನಕರ್ ಶೆಟ್ಟಿ ತಿಳಿಸಿದ್ದಾರೆ.