ಕೂಡಿಗೆ, ಮಾ. 18: ಭಾರತೀಯ ಜನತಾ ಪಕ್ಷದ ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಬಿ.ಭಾರತೀಶ್ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರನ್ನೊಳಗೊಂಡಂತೆ ಮನೆ ಮನೆಗಳಿಗೆ ಭೇಟಿ ನೀಡಿ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು.

ಮತ್ತೊಮ್ಮೆ ಮೋದಿ ಎಂಬ ಬಿತ್ತಿ ಪತ್ರದೊಂದಿಗೆ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರಗಳನ್ನು ಹಂಚುವದರೊಂದಿಗೆ ಬಿಜೆಪಿ ಮನೆ ಮನೆ ಭೇಟಿಗೆ ಚಾಲನೆ ನೀಡಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ. ಭಾರತೀಶ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ವರದ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಕೂಡಿಗೆ ಬಿಜೆಪಿ ಶಕ್ತಿ ಕೇಂದ್ರದ ಮಹಿಳಾ ಮೋರ್ಚದ ಅಧ್ಯಕ್ಷೆ ಸಾವಿತ್ರಿ ರಾಜು, ಕಾರ್ಯದರ್ಶಿ ಕೆ. ಕನಕ, ತಾಲೂಕಿನ ಪದಾಧಿಕಾರಿಗಳಾದ ನಿರ್ಮಲ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಚಂದ್ರು ಮೂಡ್ಲಿಗೌಡ, ವರದರಾಜ್‍ದಾಸ್, ಆರ್.ಕೃಷ್ಣ, ಶಕ್ತಿ ಕೇಂದ್ರದ ಮಹಿಳಾ ಮೋರ್ಚದ ಮಂಜುಳಾ, ಗೌರಿ, ಸುಶೀಲ, ಸಾವಿತ್ರಮ್ಮ, ರತ್ನಮ್ಮ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.