ಸೋಮವಾರಪೇಟೆ, ಮಾ. 18: ಇಲ್ಲಿನ ಶ್ರೀ ರಾಮಮಂದಿರದ ಸೀತಾ ಬಳಗದ ವತಿಯಿಂದ ತಾ.21ರಂದು ಬೆಳಿಗ್ಗೆ 9 ಗಂಟೆಯಿಂದ ರಾಮಮಂದಿರದಲ್ಲಿ ವಾರ್ಷಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.

ಪೂರ್ವಾಹ್ನ 11 ಗಂಟೆಗೆ ಶ್ರೀ ಬಸವೇಶ್ವರ ದೇವಾಲಯದ ಅರ್ಚಕ ಮೃತ್ಯುಂಜಯ ಶಾಸ್ತ್ರೀ ಅವರಿಂದ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿದೆ ಎಂದು ಸೀತಾ ಬಳಗದ ಉಮಾ ಗಣಪತಿ ತಿಳಿಸಿದ್ದಾರೆ.