ಮಡಿಕೇರಿ, ಮಾ. 18: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘದ ವತಿಯಿಂದ ತಾ. 20 ರಂದು ಪೂರ್ವಾಹ್ನ 10.30ಗಂಟೆಗೆ ವೀರಾಜಪೇಟೆ ಮಲಬಾರ್ ರಸ್ತೆಯಲ್ಲಿರುವ ಕಾಲೇಜಿನ ಕಲಾ ವಿಭಾಗದ ಕಟ್ಟಡದ ಸಭಾಂಗಣದಲ್ಲಿ “ಇನ್ನೋವೇಟಿವ್ ಎಕ್ಸ್‍ಪೋ-2019” ಶೀರ್ಷಿಕೆಯಡಿ ಕೊಡಗು ಸೇರಿದಂತೆ ಹೊರಜಿಲ್ಲೆಯ ಹಲವು ಕಾಲೇಜುಗಳ ಪದವಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ.