ಭಾಗಮಂಡಲ, ಮಾ. 19: ಭಾರತ ಸರ್ಕಾರದ ಹನಿಮಿಷನ್ ಯೋಜನೆಯಡಿ ಖಾದಿ ಗ್ರಾಮೋದ್ಯೋಗ ಅಯೋಗದ ವತಿಯಿಂದ 25 ಜನ ಫಲಾನುಭವಿಗಳಿಗೆ 5 ದಿನಗಳ ಜೇನುಕೃಷಿ ತರಬೇತಿ ಕಾರ್ಯಾಗಾರ ತಾ. 15 ರಿಂದ ಆರಂಭಗೊಂಡಿದ್ದು, ತಾ. 19 ರವರೆಗೆ ಭಾಗಮಂಡಲದ ಸರ್ಕಾರಿ ಜೇನು ಕೃಷಿ ತರಬೇತಿ ಕೇಂದ್ರದಲ್ಲಿ ನಡೆಯಲಿದೆ.

ಕಾರ್ಯಾಗಾರದ ಉದ್ಘಾಟನೆಯನ್ನು ಸಂಘದ ಉಪಾಧ್ಯಕ್ಷ ಪೊಡನೋಳನ ಸಿ. ವಿಠಲ ನೆರವೇರಿಸಿದರು. ಕಾರ್ಯಾಗಾರಕ್ಕೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಆರ್ಥಿಕ ನೆರವು ನೀಡಲಿದ್ದು, ತರಬೇತಿ ಪಡೆದ ಫಲಾನುಭವಿಗಳಿಗೆ 10 ಜೇನುಪೆಟ್ಟಿಗೆ, 10 ಜೇನು ಒಕ್ಕಲು, ಮುಖಪರದೆ, ಸ್ಮೋಕರ್, ಸ್ಟ್ಯಾಂಡ್, ಜೇನು ತೆಗೆಯುವ ಯಂತ್ರವನ್ನು ಉಚಿತವಾಗಿ ನೀಡುವದಾಗಿ ತಿಳಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಕುಸುಮಾ, ಜೀವನ್ ಕುಮಾರ್ ಪ್ರಸನ್ನಕುಮಾರ್, ಸಂಘದ ಕಾರ್ಯದರ್ಶಿ ಎನ್.ಎನ್. ಅಶೋಕ, ಲೆಕ್ಕಿಗರಾದ ಸುಧಾ ಮತ್ತು ತರಬೇತಿ ಕೇಂದ್ರ ತಾಂತ್ರಿಕ ಸಿಬ್ಬಂದಿ ಬಸವಣ್ಣ ಹಾಜರಿದ್ದರು.