ವೀರಾಜಪೇಟೆ, ಮಾ. 19: ಕೊಡಗು ಜಿಲ್ಲಾ ಪಂಚಾಯತ್, ವೀರಾಜಪೇಟೆ ತಾಲೂಕು ಪಂಚಾಯತ್, ಪೊನ್ನಂಪೇಟೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ವೀರಾಜಪೇಟೆ ಪಶುವೈದ್ಯ ಆಸ್ಪತ್ರೆ ಹಾಗೂ ಕೆನರಾ ಬ್ಯಾಂಕ್ ವೀರಾಜಪೇಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾ. 20 ರಂದು (ಇಂದು) ಬೆಳಿಗ್ಗೆ 9ಗಂಟೆಗೆ ಕೆ.ಬೋಯಿಕೇರಿ ಅಂಗನವಾಡಿ ಮೈದಾನದಲ್ಲಿ ಮಿಶ್ರತಳಿ ಹಸುಗಳ ಹಾಗೂ ಕರುಗಳ ಪ್ರದರ್ಶನ ಮತ್ತು ಪಶು ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಶಿಬಿರದ ಉದ್ಘಾಟನೆಯನ್ನು ಕೆನರಾ ಬ್ಯಾಂಕ್ ವೀರಾಜಪೇಟೆ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ರಾಮಚಂದ್ರ ಕೆ. ಸಬ್ನಿಸ್ ನೆರವೇರಿಸಲಿದ್ದಾರೆ. ಮಡಿಕೇರಿಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಎ.ಬಿ. ತಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೆನರಾ ಬ್ಯಾಂಕ್ ವೀರಾಜಪೇಟೆ ಶಾಖೆಯ ಕೃಷಿ ವಿಸ್ತರಣಾ ಅಧಿಕಾರಿ ವಿ.ಕೆ. ಮುಬಶ್ಶಿನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಡಿಕೇರಿ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ನರಿಯಂದಡ, ಚೆಯ್ಯಂಡಾಣೆ, ಪಶು ಪಾಲನಾ ಇಲಾಖೆ, ಅಯ್ಯಪ್ಪ ಯುವಕ ಸಂಘ, ನಂದಿನಿ ಹಾಗೂ ಚಾಂದಿನಿ ಸ್ತ್ರೀಶಕ್ತಿ ಸ್ವಸಹಾಯ ಸಂಘ ನರಿಯಂದಡ ಇವರ ಸಹಯೋಗದಲ್ಲಿ ತಾ. 20 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನರಿಯಂದಡ ಅಯ್ಯಪ್ಪ ಯುವಕ ಸಂಘದ ಆವರಣದಲ್ಲಿ ನರಿಯಂದಡ ಗ್ರಾಮದಲ್ಲಿ ಮಿಶ್ರತಳಿ ಹಸು, ಕರುಗಳ ಪ್ರದರ್ಶನ ಹಾಗೂ ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಶಿಬಿರ ಉದ್ಘಾಟನೆಯನ್ನು ನಿವೃತ್ತ ಹೈಕೋರ್ಟ್ ವಕೀಲ ಪೊಕ್ಕುಳಂಡ್ರ ಅಪ್ಪಾಜಿ ನೆರವೇರಿಸಲಿದ್ದು, ಬಹುಮಾನ ವಿತರಣೆಯನ್ನು ಪ್ರಗತಿಪರ ಕೃಷಿಕ ಬಿಳಿಯಂಡ್ರ ಕೃಷ್ಣಪ್ಪ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಶುಲಾಪನಾ ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಎ.ಬಿ. ತಮ್ಮಯ್ಯ, ಮಡಿಕೇರಿ ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಪಿ.ಸಿ. ಬೊಳ್ಕ ಹಾಗೂ ನರಿಯಂದಡ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ತೋಟಂಬೈಲು ಅನಂತಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.