ಕೂಡಿಗೆ, ಮಾ.18: ಶಿರಂಗಾಲದಲ್ಲಿರುವ ಮದ್ಯದ ಅಂಗಡಿಯಿಂದ ಗ್ರಾಮದ ಒಳಗೆ ಮನೆಯಲ್ಲಿ ಮಾರಾಟ ಮಾಡಲು ಮದ್ಯ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿ ಸೇರಿದಂತೆ ಅವನ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿರಂಗಾಲದ ಲೋಕೇಶ್ ಎಂಬವರು ತನ್ನ ಬೈಕ್‍ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ ಸಂದರ್ಭದಲ್ಲಿ ಬಂಧಿಸಿ ಬೈಕ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಡಿವೈಎಸ್‍ಪಿ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ದಿನೇಶ್‍ಕುಮಾರ್, ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ನಂದೀಶ, ಸಿಬ್ಬಂದಿಗಳಾದ ದಯಾನಂದ, ಜೋಸೆಫ್, ಸಜಿ, ಪ್ರಕಾಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.