ಮಡಿಕೇರಿ, ಮಾ. 17: ಮೂರ್ನಾಡು ಪದವಿ ಕಾಲೇಜಿನ ಕಾವೇರಿ ಸಭಾಂಗಣದಲ್ಲಿ ಪೋಷಕರು ಹಾಗೂ ಶಿಕ್ಷಕರ ಸಭೆ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಾಚೇಟ್ಟಿರ ಮಾದಪ್ಪ ಮಾತನಾಡಿ, ಪೋಷಕರಿಗೆ ಕಾಲೇಜಿನ ಪ್ರಗತಿಯ ಬಗ್ಗೆ ತಿಳಿಸಿಕೊಟ್ಟರು. ಕಾಲೇಜಿನ ಏಳಿಗೆಗೆ ಉತ್ತಮ ಸಲಹೆ ಸೂಚನೆಗಳನ್ನು ಪೋಷಕರು ನೀಡಬಹುದೆಂದು ತಿಳಿಸಿದರು. ಪೋಷಕರ ವರ್ಗದ ವರಿಗೆ ಕಾಲೇಜಿನಲ್ಲಿ ಇದುವರೆಗೆ ನಡೆದಂತಹ ಎಲ್ಲಾ ಪ್ರಗತಿಪರ ಕಾರ್ಯಕ್ರಮವನ್ನು ಸ್ಲೆಡ್ ಶೋ ಮೂಲಕ ತೋರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಪ್ರಥಮವಾಗಿ ಮೂಡಬೇಕು. ಉತ್ತಮ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಪೋಷಕರು ಆಗಿಂದ್ದಾಗೆ ಕಾಲೇಜಿಗೆ ಭೇಟಿ ಮಾಡಿ ತಮ್ಮ ಮಕ್ಕಳ ಪ್ರಗತಿಯನ್ನು ಗಮನಿಸುತ್ತಿರಬೇಕೆಂದು ಹೇಳಿದರು. ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂತರ ಕಾಲೇಜು ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಇತ್ತೀಚೆಗೆ ನಡೆದ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಬೆಂಗಳೂರಿನ ಇನ್‍ಫೋಸಿಸ್‍ಗೆ ಆಯ್ಕೆಯಾದ ನಾಲ್ವರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ನಿರೂಪಣೆ ಯನ್ನು ಉಪನ್ಯಾಸಕ ನೆರ್ಪಂಡ ಹರ್ಷ ಮಂದಣ್ಣ ಮಾಡಿದರೆ, ಉಪನ್ಯಾಸಕ ಹರೀಶ್ ಸ್ವಾಗತಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಇತರ ನಿರ್ದೇಶಕರು ಹಾಜರಿದ್ದರು. ಉಪನ್ಯಾಸಕಿ ವಿಲ್ಮ ವಂದಿಸಿದರು.