ವೀರಾಜಪೇಟೆ, ಮಾ. 17: ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ನಡೆದ ಸರಳ ಸಮಾರಂಭದಲ್ಲಿ ಇಲಾಖೆಯಲ್ಲಿ ತನ್ನ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಉಪ ಪೊಲೀಸ್ ಆರಕ್ಷಕ ನಿರೀಕ್ಷಕ ಮಾದಪ್ಪ ಪಿ.ಎಂ. ಅವರಿಗೆ ಅತ್ಮೀಯವಾಗಿ ಬೀಳ್ಕೂಡಲಾಯಿತು. ಆರಕ್ಷಕ ಉಪ ಅಧೀಕ್ಷಕ ನಾಗಪ್ಪ ಮಾದಪ್ಪ ಅವರು ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ಅವರ ಸೇವೆಯನ್ನು ಇಲಾಖೆಯೂ ಎಂದಿಗೂ ಸ್ಮರಿಸುತ್ತದೆ. ಅವರ ನಿವೃತ್ತ ಜೀವನ ಸುಖಮಯವಾಗಿರಲೆಂದು ಹೇಳಿದರು. ಸಮಾರಂಭದಲ್ಲಿ ಗ್ರಾಮಂತರ ಠಾಣೆಯಲ್ಲಿ ಸೇವೆ ಸಲ್ಲಿಸಿ ಇತರೆಡೆಗೆ ವರ್ಗಾವಣೆಗೊಂಡಿರುವ ಸಿಬ್ಬಂದಿಗಳಾದ ಗೀತಾ.ಕೆ. ಹೆಚ್.ಟಿ. ವೆಂಕಟೇಶ್, ಬೆಳ್ಯಪ್ಪ ಪಿ. ಮತ್ತು ರಾಜೇಂದ್ರ ಹೆಚ್.ಸಿ. ಅವರಿಗೆ ಠಾಣೆಯ ವತಿಯಿಂದ ಪುಷ್ಪಗುಚ್ಚ ನೀಡಿ ಬೀಳ್ಕೊಡಲಾಯಿತು.

ಸಮಾರಂಭದ ವೇದಿಕೆಯಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಮತ್ತು ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮಾಂತರ ಮತ್ತು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.