ಮಡಿಕೇರಿ, ಮಾ.15 : ಕುಶಾಲನಗರ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ, ಭೂ ಮಾಫಿಯಾ ಮತ್ತು ಭ್ರಷ್ಟರ ಪಾಲಾಗುತ್ತಿದ್ದು, ಇದನ್ನು ತಪ್ಪಿಸಲು ಉಪ ವಿಭಾಗಾಧಿಕಾರಿಗಳ ನೆÉೀತೃತ್ವದ ಟಾಸ್ಕ್ ಫೋರ್ಸ್ ರಚಿಸಬೇಕೆಂದು ಕುಶಾಲನಗರ ಸರ್ಕಾರಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖ ವಿ.ಪಿ. ಶಶಿಧರ್, ಸರ್ಕಾರಿ ಭೂಮಿ ಒತ್ತುವರಿ ಯಾಗು ತ್ತಿರುವ ಬಗ್ಗೆ ಸಮಿತಿ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರೂ ಬೇನಾಮಿ ಹೆಸರಿನಲ್ಲಿ ಜಾಗ ಪರರ ಪಾಲಾಗುತ್ತಿದೆಯೆಂದು ಆರೋಪಿಸಿ ದರು. ಇತ್ತೀಚೆಗೆ ಕುಶಾಲನಗರವನ್ನು ಪ್ರತ್ಯೇಕ ತಾಲೂಕೆಂದು ಘೋಷಿಸ ಲಾಗಿದ್ದು, ಸರ್ಕಾರಿ ಕಚೇರಿಗಳಿಗೆ ಕಟ್ಟಡ ನಿರ್ಮಿಸಲು ಜಾಗದ ಕೊರತೆ ಎದುರಾಗುವದರಿಂದ ಪ್ರತ್ಯೇಕ ತಾಲೂಕು ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ. ಮಿನಿ ವಿಧಾನಸೌಧ ಸೇರಿದಂತೆ ವಿವಿಧ ಇಲಾಖಾ ಕಚೇರಿಗಳು ನಿರ್ಮಾಣಗೊಳ್ಳಲು ಸರ್ಕಾರಿ ಜಾಗದ ಅಗತ್ಯವಿದೆ. ಲಭ್ಯವಿರುವ ಜಾಗವನ್ನು ಕೂಡ ಭೂ ಮಾಪಿಯಾ ಮತ್ತು ಭ್ರಷ್ಟರು ಕಬಳಿಸುತ್ತಿದ್ದಾರೆ ಎಂದು ಶಶಿಧರ್ ಆರೋಪಿಸಿದರು.
ಸರ್ಕಾರಿ ಭೂಮಿ ನಿಯಮ ಬಾಹಿರವಾಗಿ ಪರಭಾರೆಯಾಗುತ್ತಿದ್ದು, ಇದರಲ್ಲಿ ಕಂದಾಯ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಆರೋಪಿಸಿ ದರು. ಮಂಜೂರಾತಿಯ ಹಂತದಲ್ಲಿ ರುವ ಬಸ್ ಡಿಪೋ, ವಕ್ರ್ಸ್ ಶಾಪ್ ಸೇರಿದಂತೆ ವಿವಿಧ ಇಲಾಖೆಗಳ ಕಾಮ ಗಾರಿಗಳು ಜಾಗದ ಅಲಭ್ಯತೆಯಿಂದ ಸ್ಥಗಿತಗೊಂಡಿವೆ. ಕುಶಾಲನಗರ ಪಟ್ಟಣದ ಪೈಸಾರಿ, ಗೋಮಾಳ, ಕೆರೆ ಉದ್ಯಾನವನ, ಕಡಂಗ, ಕುಂಬಾರ ಗುಂಡಿ, ಜೋಡಿ ಸಾಗು ಇತ್ಯಾದಿ ಪ್ರಕಾರದ ಸರ್ಕಾರಿ ಜಾಗಗಳು ಉಳ್ಳವರ, ಶ್ರೀಮಂತರ, ಪ್ರಭಾವಿ ರಾಜಕಾರಣಿಗಳ, ಭ್ರಷ್ಟ ಅಧಿಕಾರಿಗಳ ಪಾಲಾಗುತ್ತಿದೆಯೆಂದು ಆರೋಪಿಸಿದರು.
ಕುಶಾಲನಗರದ 165/3ರ 1.50 ಎಕರೆ ಜಾಗವನ್ನು ಬೇನಾಮಿ ಹೆಸರಿನಲ್ಲಿ ಮಂಜೂರಾತಿ ಮಾಡ ಲಾಗಿತ್ತು. ತೀವ್ರ ಹೋರಾಟ ನಡೆದ ನಂತರ ಮಂಜೂರಾತಿ ಪ್ರಕ್ರಿಯೆ ರದ್ದಾಗಿತ್ತಾದರೂ ಇದೀಗ ಮತ್ತೆ ಪರಭಾರೆ ಪ್ರಕ್ರಿಯೆ ನಡೆದಿದೆ. ಸರ್ಕಾರಿ ಭೂಮಿ ಕಬಳಿಕೆ ದಂಧೆಯಲ್ಲಿ ದಲ್ಲಾಳಿಗಳು ಪಾಲುದಾರರಾಗಿದ್ದು, ದಲ್ಲಾಳಿಗಳ ನಡುವಿನ ಕಲಹದಿಂದ ಅಶಾಂತಿಯ ವಾತಾವರಣ ಮೂಡುತ್ತಿದೆ. ಈ ಬೆಳವಣಿಗೆ ಪಟ್ಟಣದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟ ಶಶಿಧರ್, ಎಲ್ಲಾ ಸರ್ಕಾರಿ ಜಾಗವನ್ನು ಟಾಸ್ಕ್ ಫೋರ್ಸ್ ಮೂಲಕ ಸರ್ವೇ ನಡೆಸಿ, ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತ ತನ್ನ ವಶಕೆ ಪಡೆಯಬೇಕು ಮತ್ತು ಅಕ್ರಮವಾಗಿ ಭೂಮಿ ಹೊಂದಿರು ವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು. ಭೂ ಕಬಳಿಕೆ ಪ್ರಕರಣದಲ್ಲಿ ಶಾಮೀಲಾಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು ಅಮಾನತು ಗೊಳಿಸಬೇಕೆಂದು ಒತ್ತಾಯಿಸಿದರು.
ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಮಾಬಂದಿಯಿಂದ ಫಾರಂ ನಂ.3ಕ್ಕೆ ಆಸ್ತಿ ದಾಖಲೆ ಪರಿವರ್ತನೆಯಾದ ನಂತರ, ಆಯಾಕಟ್ಟಿನ ಸರ್ಕಾರಿ ಜಾಗಗಳು ಬೆÉೀನಾಮಿ ಹೆಸರಿನಲ್ಲಿ ಪರಭಾರೆ ಮಾಡಿ ಜಾಗಗಳಿಗೆ ಮಾಲಿಕತ್ವವವನ್ನು ಸೃಷ್ಟಿಸಲಾಗಿದೆ. ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕೆಂದು ಶಶಿಧರ್ ಆಗ್ರಹಿಸಿದರು.
ಸಮಿತಿ ಪ್ರಮುಖ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿ, ಪಟ್ಟಣ ಪ್ರದೇಶಗಳಿಂದ 3 ಕಿ.ಮೀ. ಹಾಗೂ ರಕ್ಷಿತಾರಣ್ಯ ಪ್ರದೇಶದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮದಡಿ ಯಾವದೇ ಜಾಗ ಮಂಜೂರಾತಿಗೆ ಅವಕಾಶವಿಲ್ಲ. ಆದರೆ, ಇದೀಗ ಪಟ್ಟಣ ವ್ಯಾಪ್ತಿಯಲ್ಲೆ ಜಾಗ ಮಂಜೂರಾತಿ ಮಾಡಿರು ವದರೊಂದಿಗೆ ಇದೀಗ ಸಾಕಷ್ಟು ಮಂದಿ ಫಾರಂ ನಂ.56 ಮತ್ತು 57ನ್ನು ಸಲ್ಲಿಸಿದ ಪ್ರಕರಣಗಳಿವೆ. ಇವೆಲ್ಲವು ಗಳನ್ನು ತಕ್ಷಣವೆ ಜಿಲ್ಲಾಡಳಿತ ರದ್ದುಗೊಳಿಸಿ ಸರ್ಕಾರಿ ಜಾಗವನ್ನು ಸಂರಕ್ಷಿಸಬೇಕು. ಇಲ್ಲವಾದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವ ಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡಲು ಸಿದ್ಧತೆ ನಡೆಸಿರುವದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ಚೇಂಬರ್ ಅಧ್ಯಕ್ಷ ಅಮೃತರಾಜ್, ಕುಶಾಲನಗರ ಪಪಂ ಸದಸ್ಯ ಬಿ.ಎಸ್.ಆನಂದ ಕುಮಾರ್, ಮಾದಾಪಟ್ಟಣದ ಅಣ್ಣಯ್ಯ, ಹಾಗೂ ಸಮಿತಿಯ ಕೆ.ಎಸ್.ನಾಗೇಶ್ ಉಪಸ್ಥಿತರಿದ್ದರು.