ಮಡಿಕೇರಿ, ಮಾ. 15: ಈಗಾಗಲೇ ಲೋಕಸಭಾ ಚುನಾವಣೆ ನಿಗದಿ ಗೊಂಡಿದ್ದು, ಬಹು ತೇಕ ವಿಚಾರಗಳಿಗೆ ಅಂಕುಶ ಬಿದ್ದಿದೆ. ಮುಕ್ತ - ನ್ಯಾಯ ಸಮ್ಮತ ಚುನಾವಣೆಗೆ ಹಲವು ಕ್ರಮ ಅನಿವಾರ್ಯ ವಾದರೂ ದೈನಂದಿನ ಸಮಸ್ಯೆ ಗಳು, ಅಪಾಯಕಾರಿ ಸನ್ನಿವೇಶ ಗಳು ಸಮರ್ಪಕ ಗೊಳ್ಳಬೇಕಲ್ಲವೆ.?
ಮೇಲಿನ ಚಿತ್ರ ನೋಡಿ ಇದು ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ಎಲ್‍ಐಸಿ ಬಳಿ ದಿನಂಪ್ರತಿ ಹಲವಷ್ಟು ವಾಹನಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ತಿರುಗಾಡುವ ರಸ್ತೆಯ ಬದಿಯ ದೃಶ್ಯ. ಪೈಪ್‍ಲೈನ್ ಅಳವಡಿಕೆಗೆಂದು ಗುಂಡಿ ತೆಗೆಯಲಾಗಿದೆ. ಆದರೆ ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಇದನ್ನು ಸರಿಪಡಿಸುವತ್ತ ಯಾರೂ ಗಮನ ಹರಿಸಿಲ್ಲ.
-ದಾದ