ಮಡಿಕೇರಿ, ಮಾ. 16: ಗೋಣಿಕೊಪ್ಪಲುವಿನ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಸಂಸ್ಥೆಯಿಂದ ವಿದ್ಯಾರ್ಥಿಗಳ ಆಟೋಟಕ್ಕೆ ಚಿಣ್ಣರ ಜಾರುಬಂಡಿ, ಚಿಣ್ಣರ ಏತಬಾತ ಹಾಗೂ ವೃತ್ತ ಏಣಿಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ದಿಲನ್ ಚಂಗಪ್ಪ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್ ಉದ್ಘಾಟಿಸಿದರು.
ಈ ಸಂದರ್ಭ ರೋಟರಿ ಸಂಸ್ಥೆಯ ಅಧ್ಯಕ್ಷರು ವಿದ್ಯಾರ್ಥಿಗಳು ಈ ಆಟೋಪಕರಣಗಳ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ಹೇಳಿದರು.
ಶಾಲೆಯ ಮುಖ್ಯೋಪಾ ಧ್ಯಾಯಿನಿ ಕೆ.ಆರ್. ಶಶಿಕಲಾ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ಖಜಾಂಚಿ ಪ್ರಮೋದ್ ಕಾಮತ್, ಕಾನೂನು ಸಲಹೆಗಾರ ಸಂಜೀವ ಹಾಗೂ ನವೀನ್, ನಾಗರಾಜು ಮೊದಲಾದವರು ಪಾಲ್ಗೊಂಡಿದ್ದರು.