ಗೋಣಿಕೊಪ್ಪ ವರದಿ, ಮಾ. 16: ಹೈಕೊರ್ಟ್ ಸೂಚನೆಯಂತೆ ಮತ್ತಿಗೋಡು ಸಾಕಾನೆ ಶಿಬಿರ ವ್ಯಾಪ್ತಿಯಲ್ಲಿ ರಸ್ತೆ ವೈಜ್ಞಾನಿಕ ಉಬ್ಬು ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಹೈಕೋರ್ಟ್ ನಿರ್ದೇಶನದಂತೆ ಲೋಕೋಪ ಯೋಗಿ ಇಲಾಖೆ ಉಬ್ಬು ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಇದರಂತೆ 11 ಕಿ. ಮೀ. ವ್ಯಾಪ್ತಿಯಲ್ಲಿ 10 ಕಡೆ ನಿರ್ಮಾಣ ವಾಗಲಿದೆ. ಪ್ರತೀ ಉಬ್ಬುಗಳು ಸುಮಾರು 5. ಮೀಟರ್ ಅಗಲವಿರುತ್ತದೆ. ಮಧ್ಯ ಭಾಗದಲ್ಲಿ ಮಾತ್ರ 15 ಸೆಂಟಿ ಮೀಟರ್ ಎತ್ತರವಿರುತ್ತದೆ. ಪ್ರತೀ 500 ಮೀಟರ್‍ಗೆ ಒಂದರಂತೆ ಉಬ್ಬು ನಿರ್ಮಿಸಲಾಗುತ್ತಿದೆ.
ವೈಜ್ಞಾನಿಕವಾಗಿ ರಸ್ತೆ ಉಬ್ಬು ನಿರ್ಮಿಸಲು ಕಾನೂನು ತೊಡಕು ಕೂಡ ಇತ್ತು. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಸ್ತೆ ಸಾರಿಗೆ ಪ್ರಾಧೀಕಾರ ಅಧಿಕಾರಿಗಳ ತಂಡ ಚರ್ಚೆ ನಡೆಸಿ ತೀರ್ಮಾನಕೈಗೊಳ್ಳಬೇಕಿತ್ತು. ಆದರೆ, ಇದೀಗ ಹೈಕೋರ್ಟ್ ಸೂಚನೆ ಪಾಲಿಸಲಾಗುತ್ತಿದೆ. ಇದರಂತೆ ವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಲೋಕೋಪಯೋಗಿ ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಎಂ.ಇ. ಸುರೇಶ್ ಮಾಹಿತಿ ನೀಡಿದ್ದಾರೆ.
- ದಿನೇಶ್, ಸುದ್ದಿಪುತ್ರ