*ಗೋಣಿಕೊಪ್ಪಲು, ಮಾ. 15: ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಪಲ್ಸ್‍ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ಹಾಕಲಾಯಿತು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಶೇ. 99 ಲಸಿಕೆ ಹಾಕಿರುವದಾಗಿ ವೈದ್ಯರಾದ ಪ್ರತಾಪ್ ಮಾಹಿತಿ ನೀಡಿದರು.

ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ ಸುಮಾರು 12 ಬೂತ್‍ಗಳಾದ ಬಾಳೆಲೆ, ದೇವನೂರು, ಕಾರ್ಮಾಡು, ಕೊಟ್ಟಗೇರಿ, ಪಾಲ್ದಳ, ಚೆನ್ನಂಗೋಲಿ, ಮಾಯಮುಡಿ, ಕೋಣನಕಟ್ಟೆ, ಪೊನ್ನಪ್ಪಸಂತೆ, ಕಿರುಗೂರು, ನಿಟ್ಟೂರು, ಸುಳುಗೋಡು ಗ್ರಾಮಗಳಲ್ಲಿ ಪಲ್ಸ್‍ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆದವು.

ಶುಶ್ರೂಷಕಿಯರಾದ ವಿದ್ಯಾ, ಚಂದ್ರಕಲಾ, ಪೂಜ, ಡಿ ಗ್ರೂಪ್ ನೌಕರರಾದ ಮಲ್ಲಜಮ್ಮ, ಕಲ್ಯಾಣಮ್ಮ ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.